»   » ಬಿಗ್ ಟಿವಿಯಿಂದ ಕನ್ನಡ ಸಿನಿಮಾ ಚಾನೆಲ್ ಪ್ರಾರಂಭ

ಬಿಗ್ ಟಿವಿಯಿಂದ ಕನ್ನಡ ಸಿನಿಮಾ ಚಾನೆಲ್ ಪ್ರಾರಂಭ

Subscribe to Filmibeat Kannada

ಬೆಂಗಳೂರು, ಆ.21: ರಿಲಯನ್ಸ್ ಕಮ್ಯೂನಿಕೇಶನ್ಸ್ ಲಿಮಿಟೆಡ್‌ನ ಅಧೀನ ಸಂಸ್ಥೆಯಾದ ರಿಲಾಯನ್ಸ್ ಬಿಗ್ ಟಿವಿ ಲಿಮಿಟೆಡ್ ಕನ್ನಡ ಸಿನಿಮಾ ಚಾನೆಲ್ ಸೇರಿದಂತೆ 32 ಪ್ರತ್ಯೇಕ ಸಿನಿಮಾ ಚಾನೆಲ್‌ಗಳನ್ನು ಬುಧವಾರ ಪ್ರಾರಂಭಿಸಿತು.

ರಿಲಯನ್ಸ್ ಸಂಸ್ಥೆಯು ದೇಶದ ಪ್ರಪ್ರಥಮ ಚಂದಾದಾರಿಕೆ ಬೇಡಿಕೆ ಮೇಲೆ ವೀಡಿಯೋ ಸೇವೆಯನ್ನು ಆರಂಭಿಸಿದ್ದು ಗ್ರಾಹಕರು ಬಿಗ್ ಟಿವಿ ಡಿಟಿಎಚ್ ಬಳಸಿ 600 ಸಿನಿಮಾಗಳನ್ನು ಪ್ರತೀ ವರ್ಷ ವೀಕ್ಷಿಸಬಹುದಾಗಿದೆ."ಬಿಗ್ ಟಿವಿಯು ಇದೇ ಮೊದಲ ಬಾರಿಗೆ ಭಾರತದಲ್ಲಿ ತಂತ್ರಜ್ಞಾನ, ಮಾಹಿತಿ ಮತ್ತು ಮನೋರಂಜನೆಯನ್ನು ದೊಡ್ಡ ಪ್ರಮಾಣದಲ್ಲಿ ನೀಡಲು ಸಜ್ಜಾಗಿದೆ. ಬಿಗ್ ಟಿವಿ ಗ್ರಾಹಕರು 32 ಪ್ರತ್ಯೇಕ ಸಿನಿಮಾ ಚಾನೆಲ್‌ಗಳನ್ನು ನೋಡಬಹುದಾಗಿದ್ದು ಈಗ ಲಭ್ಯವಾಗುತ್ತಿರುವ ಸಿನಿಮಾ ಚಾನೆಲ್‌ಗಳಿಗಿಂತಲೂ ಹೆಚ್ಚಿನ ಸಂಖ್ಯೆಯದ್ದಾಗಲಿದೆ" ಎಂದು ರಿಲಾಯನ್ಸ್ ಕಮ್ಯೂನಿಕೇಶನ್ ಅಪ್ಲಿಕೇಶನ್ಸ್ ಸೇವಾ ವಿಭಾಗದ ಅಧ್ಯಕ್ಷ ಮಹೇಶ್ ಪ್ರಸಾದ್ ತಿಳಿಸಿದರು.

''ಕ್ಷಿಪ್ರವಾಗಿ ಬೆಳವಣಿಗೆ, ತೀವ್ರ ಸ್ಪರ್ಧೆ ನೀಡುವ ಮತ್ತು ಉತ್ತೇಜನಕಾರಿ ಮಾರುಕಟ್ಟೆಯನ್ನು ದಕ್ಷಿಣ ಭಾರತದಲ್ಲಿ ನಿರ್ಮಿಸಲು ಬಿಗ್ ಟಿವಿ ಶ್ರಮಿಸಲಿದೆ. ಡಿಜಿಟಲ್ ಚಿತ್ರ ಮತ್ತು ಶಬ್ದದ ಅನುಭವನ್ನು ನೀಡುವ ತನ್ನದೇ ಆದ ಕನ್ನಡ ಸಿನಿಮಾ ಚಾನೆಲ್ ಒಂದನ್ನು ಸ್ಥಳೀಯರಿಗಾಗಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಆರಂಭಿಸುತ್ತಿರುವುದು ಸಂತಸದ ವಿಚಾರ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಬಿಗ್ ಟಿವಿ ಡಿಟಿಎಚ್ ಸೇವೆಯು ಕರ್ನಾಟಕ ರಾಜ್ಯದ 388 ಸ್ಥಳಗಳಲ್ಲಿನ 18 ರಿಲಾಯನ್ಸ್ ವರ್ಲ್ಡ್ ಮತ್ತು 48ರಿಲಾಯನ್ಸ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ದಕ್ಷಿಣ ಭಾರತದ1614 ಪ್ರಮುಖ ಸ್ಥಳಗಳ 28885 ರಿಲಯನ್ಸ್ ಮಾರುಕಟ್ಟೆಯಲ್ಲಿ ಡಿಜಿಟಲ್ ಹೋಂ ಎಂಟರ್‌ಟೈನ್‌ಮೆಂಟ್ ಸೇವೆ ಲಭ್ಯವಾಗಲಿದೆ.ಹೋಂ ಎಂಟರ್‌ಟೈನ್‌ಮೆಂಟ್ ಸೇವೆಯು ಬಿಗ್ ಟಿವಿ ಡಿಟಿಎಚ್ ಮೂಲಕ ದೇಶದ 120 ದಶಲಕ್ಷ ಪ್ರೇಕ್ಷಕರನ್ನು ತಲುಪಲಿದೆ. ಪ್ರಪಂಚದ ಅತ್ಯಾಧುನಿಕ MPEG 4 ತಂತ್ರಜ್ಞಾನವನ್ನು ಇದೇ ಮೊದಲ ಬಾರಿಗೆ ಡಿಟಿಎಚ್ ಸೇವೆಗಾಗಿ ಬಳಸಲಾಗುತ್ತಿದೆ. ಬಿಗ್ ಟಿವಿ ಡಿಟಿಎಚ್ 200 ಟಿವಿ, ಸಿನಿಮಾ ಮತ್ತು ಆಡಿಯೋ ಚಾನೆಲ್ ಗಳನ್ನು ಹೊಂದಿದ್ದು ದೇಶದಲ್ಲೇ ಅತಿ ದೊಡ್ಡ ಡಿಟಿಎಚ್ ಅಥವಾ ಕೇಬಲ್ ಅಪರೇಟರ್ ಸೇವೆಯಾಗಿ ಹೊರಹೊಮ್ಮಲಿದೆ.

"ಬಿಗ್ ಟಿವಿ ಬ್ರ್ಯಾಂಡ್ ಭಾರತೀಯ ಮನೆಗಳಲ್ಲಿ ದೂರದರ್ಶನದ ಹೊಸ ಅಲೆಯನ್ನು ಹುಟ್ಟುಹಾಕಲಿದೆ. ಬಿಗ್ ಟಿವಿ ಡಿಟಿಎಚ್ ಸೇವೆಯು ಟಿವಿ ವಿಷಯ ನಿಯಂತ್ರಣವನ್ನು ತನ್ನ 32ಪ್ರತ್ಯೇಕ ಸಿನಿಮಾ ಚಾನೆಲ್‌ಗಳು, 24x7 ಮಲ್ಟಿಪ್ಲೆಕ್ಸ್, 10ಡಿಜಿಟಲ್ ಸಾಮರ್ಥ್ಯದ ಮ್ಯೂಸಿಕ್ ಚಾನೆಲ್‌ಗಳು, ಹೊಸ ಜನಾಂಗದ ಆಧುನಿಕ ದರ್ಜೆ ತಂತ್ರಜ್ಞಾನವುಳ್ಳ "ಸುಲಭ ಬಳಕೆ"ಯ ವಿಧಾನಗಳು ಮತ್ತು ಗ್ರಾಹಕರ ಮನತಣಿಸುವ ಎಲ್ಲ ಲಕ್ಷಣಗಳನ್ನು ಹೊಂದಿದೆ ಎಂದು ಸಂಸ್ಥೆ ಆತ್ಮವಿಶ್ವಾಸ ವ್ಯಕ್ತಪಡಿಸಿದೆ.

(ದಟ್ಸ್‌ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada