ರಜತ ಪರದೆಗೆ ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ಚರಿತ್ರೆ
ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ಅವರ ಜೀವನ ಕತೆಯಾಧರಿತ ಚಿತ್ರ ಶೀಘ್ರದಲ್ಲೆ ಸೆಟ್ಟೇರಲಿದೆ. ಆದರಿದು ಅಂತಿಂಥ ಚಿತ್ರವಲ್ಲ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ರಜತ ಪರದೆ ಅಲಂಕರಿಸಲಿದೆ ಎನ್ನುತ್ತಾರೆ ಚಿತ್ರವನ್ನು ನಿರ್ದೇಶಿಸುತ್ತಿರುವ ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ.
ಇದೊಂದು ಬಹುಭಾಷಾ ಚಿತ್ರವಾಗಿದ್ದು ತೆಲುಗು ಸೇರಿದಂತೆ ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ನಿರ್ಮಿಸಲಾಗುತ್ತದೆ.ಆದರೆ ಕನ್ನಡದಲ್ಲಿ ಈ ಚಿತ್ರ ಬರುತ್ತದೋ ಇಲ್ಲವೋ ಸದ್ಯಕ್ಕೆ ಮಾಹಿತಿ ಇಲ್ಲ. ತೆಲುಗಿನಲ್ಲಿ 100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಕೋಡಿ ರಾಮಕೃಷ್ಣ ಅವರದು.
ಇತ್ತೀಚೆಗೆ ಕೋಡಿ ರಾಮಕೃಷ್ಣ ಅವರು ಪುಟ್ಟಪರ್ತಿಯ ಸಾಯಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿ ಹಲವಾರು ಮಹತ್ವದ ಸಂಗತಿಗಳನ್ನು ಹೆಕ್ಕಿಕೊಂಡು ಹೋಗಿದ್ದಾರೆ. ಸತ್ಯ ಸಾಯಿ ಬಾಬಾ ಅವರ ಅಪಾರ ಭಕ್ತಕೋಟಿ ಈ ಚಿತ್ರವನ್ನು ನಿರೀಕ್ಷಿಸುವಂತಾಗಿದೆ. (ಏಜೆನ್ಸೀಸ್)
More from Filmibeat
English summary
Telugu filmmaker Kodi Ramakrishna would make a movie on late spiritual guru Sri Sathya Sai Baba. Recently the director visited Puttaparthy, where the ashram of Sai Baba is located. The film will be made in all major languages, he added.


Click it and Unblock the Notifications












