ಮತ್ತೊಂದು ಮುಂಗಾರು ಮಳೆಯಾದ ಶೈಲೂ ಚಿತ್ರ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಂಗಾರು ಮಳೆ' ಚಿತ್ರದ ಬಳಿಕ ಜೋಗ ಜಲಪಾತ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವಂತೆ ಮಾಡಿತ್ತು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ಕೃಷ್ಣ ಅವರ ಕ್ಯಾಮೆರಾ ಕೈಚಳಕ ಮೋಡಿ ಮಾಡಿತ್ತು.
ಈಗ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಶೈಲೂ' ಚಿತ್ರವೂ ಅದೇ ರೀತಿಯ ಒಂದು ವಾತಾವರಣವನ್ನು ಸೃಷ್ಟಿಸಿದೆ. 'ಶೈಲೂ' ಚಿತ್ರವನ್ನು ಮುನ್ನಾರ್ ರಮಣೀಯ ತಾಣಗಳಲ್ಲಿ ಚಿತ್ರೀಕರಿಸಿರುವುದು ಗೊತ್ತೆ ಇದೆ. ಈ ಚಿತ್ರದಲ್ಲಿ ತೋರಿಸಿರುವ ಅತಿದೊಡ್ಡ ಬಂಡೆಗಲ್ಲು ಈಗ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ.
ಗಣೇಶ್ ಈ ಬಂಡೆಯ ಅಂಚಿಗೆ ನಿಂತು 'ಶೈಲೂ...' ಎಂದು ಕೂರು ಸನ್ನಿವೇಶವಂತೂ ಮೈನವಿರೇಳಿಸುವಂತಿತ್ತು. ಜಗದೀಶ್ ವಾಲಿ ಅವರ ಅದ್ಭುತ ಕ್ಯಾಮೆರಾ ಕೈಚಳಕ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುವಂತಿದೆ. ಚಿತ್ರದ ಪ್ರಮುಖ ಆಕರ್ಷಣೆಯೂ ಇದಾಗಿತ್ತು. ಈಗ ಇದು ಪ್ರವಾಸಿಗರನ್ನು ಅತಿಹೆಚ್ಚು ಸೆಳೆಯುತ್ತಿರುವ ತಾಣವಾಗಿದೆ. (ಏಜೆನ್ಸೀಸ್)
More from Filmibeat
English summary
Golden Star Ganesh's Shailoo becomes another Mungaru Male. After MM movie released the world famous Jog Falls attracted many tourists. Now in Shailoo movie a rock near Munnar was used for the shooting. The rock is now major attraction for tourits.


Click it and Unblock the Notifications











