»   » ಶಿವಣ್ಣನ ಜತೆಐಟಂ ಹಾಡಿಗೆ ಶೆರ್ಲಿನ್ ತಕ್ಕ ಥೈ

ಶಿವಣ್ಣನ ಜತೆಐಟಂ ಹಾಡಿಗೆ ಶೆರ್ಲಿನ್ ತಕ್ಕ ಥೈ

Subscribe to Filmibeat Kannada

ಬಟ್ಟೆ ಕಂಡ್ರೆ ಆಗದ ನಟಿಯರಲ್ಲಿ ಬಾಲಿವುಡ್‌ನ ಮಲ್ಲಿಕಾ ಶೆರಾವತ್ ಹಾಗೂ ಶೆರ್ಲಿನ್ ಚೋಪ್ರಾ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಮಲ್ಲಿಕಾ ಶೆರಾವತ್ 'ಪ್ರೀತಿ ಏಕೆ...' ಚಿತ್ರದಲ್ಲಿ ಕುಣಿದು ಒಂದಷ್ಟು ದುಡ್ಡು ಬಾಚಿಕೊಂಡು ಹೋದಮೇಲೆ. ಬಾಲಿವುಡ್‌ನ ಬಿಚ್ಚಮ್ಮಗಳು ಸಾಲುಗಟ್ಟಿ ಸ್ಯಾಂಡಲ್‌ವುಡ್ ಕಡೆ ಬರುತ್ತಿದ್ದಾರೆ. ಮಲ್ಲಿಕಾ ಶೆರಾವತ್‌ಗೂ ಮುಂಚೆ ಯಾನಾ ಗುಪ್ತಾ 'ಬಿನ್ ಲಾಡೆನ್ ನಮ್ಮ ಮಾವ, ಬಿಲ್ ಕ್ಲಿಂಟನ್ ನಮ್ಮ ಬಾವ' ಎಂದು 'ಜೋಗಿ' ಚಿತ್ರದಲ್ಲಿ ಕುಣಿದು ಒಂದಷ್ಟು ಕಾಸು ಮಾಡಿಕೊಂಡು ಹೋಗಿದ್ದಳು. ಈಗ ತನ್ನ ಮಾದಕ ಮೈಮಾಟಕ್ಕೆ ಹೆಸರಾಗಿರುವ ಶೆರ್ಲಿನ್ ಚೋಪ್ರಾ ಅಲಿಯಾಸ್ ಮೋನಾ ಚೋಪ್ರಾ ಕನ್ನಡದ ಚಿತ್ರವೊಂದರಲ್ಲಿ ಕುಣಿಯಲು ಬರುತ್ತಿದ್ದಾರೆ.

ಈಗಾಗಲೇ ಕನ್ನಡದ ಐಟಂ ಹಾಡುಗಳಲ್ಲಿ ರಾಖಿಸಾವಂತ್, ಮುಮೈತ್ ಖಾನ್, ಮಲ್ಲಿಕಾ ಶೆರಾವತ್, ಯಾನಾ ಗುಪ್ತಾ ಬಂದು ಕುಣಿದಿದ್ದಾರೆ. ರವಿಶ್ರೀವತ್ಸ ನಿರ್ದೇಶಿಸುತ್ತಿರುವ 'ಮಾದೇಶ' ಚಿತ್ರದಲ್ಲಿ ಶೆರ್ಲಿನ್ ಚೋಪ್ರಾ ಬಂದು ಕುಣಿಯಲು ಒಪ್ಪಿರುವ ಸುದ್ದಿ ಬಂದಿದೆ. ಒಂದು ಮೂಲದ ಪ್ರಕಾರ ಮಾರ್ಚ್ ತಿಂಗಳಲ್ಲಿ ಆಕೆಯ ಕಾಲ್‌ಶೀಟ್ ಗಿಟ್ಟಿಸಲು ತಯಾರಿ ನಡೆದಿದೆ. 'ಮಾದೇಶ' ಚಿತ್ರದಲ್ಲಿ ಹಾಗೆ ಬಂದು ಹೀಗೆ ಒಂದೇ ಒಂದು ಹಾಡಿನಲ್ಲಿ ಕುಣಿಯಲು ಈಕೆಗೆ ಕೊಡುತ್ತಿರುವ ಸಂಭಾವನೆ 35 ಲಕ್ಷ ರೂ. ನಂಬಲರ್ಹ ಮೂಲಗಳ ಪ್ರಕಾರ ಮಾರ್ಚ್ ತಿಂಗಳಲ್ಲಿ ಚಿತ್ರೀಕರಣವಂತೆ. ಇಮ್ರಾನ್ ನೃತ್ಯ ನಿರ್ದೇಶನದಲ್ಲಿ ಕುಣಿಯಲಿದ್ದಾರೆ. ಐಟಂ ಹಾಡಿಗಾಗಿ ಈಗಾಗಲೇ ಸೆಟ್ ಸಹಾ ಹಾಕಲಾಗಿದೆಯಂತೆ.

ಒಟ್ಟಾರೆಯಾಗಿ 'ಡೆಡ್ಲಿ ಸೋಮ', 'ಗಂಡ ಹೆಂಡತಿ' ಖ್ಯಾತಿಯ ರವಿ ಶ್ರೀವತ್ಸ ಅವರ ಮುಂದಿನ ಚಿತ್ರ 'ಮಾದೇಶ' ಚಿತ್ರೋದ್ಯಮದಲ್ಲಿ ಕುತೂಹಲ ಉಂಟುಮಾಡಿದೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ಪತ್ರಕರ್ತ ರವಿ ಬೆಳಗೆರೆ ಪ್ರಮುಖ ಪಾತ್ರದಲ್ಲಿ ಕಾಣಿಸುತ್ತಿರುವುದು ಮತ್ತೊದು ವಿಶೇಷ. ಶೆರ್ಲಿನ್ ಚೋಪ್ರಾ ದಕ್ಷಿಣದ ಯಾವುದೇ ಚಿತ್ರಗಳಲ್ಲೂ ಕಾಣಿಸಿಕೊಂಡಿಲ್ಲ. ರವಿ ಶ್ರೀವತ್ಸ ಅವರು ಈಕೆಯ ಅದ್ಯಾವ ಚಿತ್ರ ನೋಡಿ ಇಲ್ಲಿಗೆ ಕರೆತರುತ್ತಿದ್ದಾರೋ ಆ ದೇವರೇ ಬಲ್ಲ.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada