ಮಾರ್ಕಂಡೇಯ ದರ್ಶನ ಭಾಗ್ಯ ಪಡೆದ ಶಿವಣ್ಣ ದಂಪತಿ

By Rajendra

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತೀಚೆಗೆ ಪತ್ನಿ ಗೀತಾ ಸಮೇತ ತಮಿಳುನಾಡಿನ ತಿರುನಲ್ಲಾರ್‌ಗೆ ಭೇಟಿ ನೀಡಿ ಮಾರ್ಕಂಡೇಯ ಸ್ವಾಮಿಯ ದರ್ಶನ ಭಾಗ್ಯ ಪಡೆದು ಹಿಂತಿರುಗಿದ್ದಾರೆ. ಈ ದಂಪತಿಗಳ ಜೊತೆಗೆ ಅವರ ಆತ್ಮೀಯರು ದೇವಸ್ಥಾನಕ್ಕೆ ಭೇಟಿ ನೀಡಿ ಮಾರ್ಕಂಡೇಯನ ಆಶೀರ್ವಾದ ಪಡೆದರು.

ಚೆನ್ನೈನ ತನ್ನ ಹಳೆಯ ಗೆಳೆಯರೊಂದಿಗೆ ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಮಾರ್ಕಾಂಡೇಯ ದೇವಸ್ಥಾನಕ್ಕೆ ಗುರುವಾರ (ಮೇ.19) ಭೇಟಿ ನೀಡಿದ್ದರು. ಬಳಿಕ 'ಜೋಗಯ್ಯ' ಆಡಿಯೋ ಬಿಡುಗಡೆಗಾಗಿ ಬೆಂಗಳೂರಿಗೆ ಹಿಂತಿರುಗಿದರು ಶಿವಣ್ಣ. ಆಡಿಯೋ ಬಿಡುಗಡೆ ಸುದ್ದಿ.

ಅಡ್ಯಾರ್‌ನ ಫಿಲಂ ಇನ್ಸ್‌ಟಿಟ್ಯೂಟ್ ಸೇರುವುದಕ್ಕೂ ಮುನ್ನ ಶಿವಣ್ಣ ಚೆನ್ನೈನ ನ್ಯೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಬಳಿಕ ಅವರು 1986ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಶಿವಣ್ಣನ ಅಂದಿನ ನ್ಯೂ ಕಾಲೇಜ್ ಗೆಳೆಯರು ಅವರ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಹಳೆಯ ನೆನಪುಗಳೊಂದಿಗೆ ವಿಹರಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Recently Hat Trick Hero Shivarajkumar and his wife Geetha Shivarajkumar visits Markandeya Temple at Thirunallar in Tamil Nadu. Along with Shivarajkumar few friends from Chennai visited the temple and to seek the blessings of Lord Markandeya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X