»   » 'ಸ್ಲಂ ಬಾಲ'ನಿಗೆ ಸೆನ್ಸಾರ್ ನಿಂದ ಯು/ಎ ಪ್ರಮಾಣ ಪತ್ರ

'ಸ್ಲಂ ಬಾಲ'ನಿಗೆ ಸೆನ್ಸಾರ್ ನಿಂದ ಯು/ಎ ಪ್ರಮಾಣ ಪತ್ರ

Subscribe to Filmibeat Kannada

ಪತ್ರಕರ್ತೆ ಡಿ.ಸುಮನಾ ಕಿತ್ತೂರು ನಿರ್ದೇಶಿಸುತ್ತಿರುವ ಪ್ರಥಮ ಚಿತ್ರ 'ಸ್ಲಂ ಬಾಲ' ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ U/A ಪ್ರಮಾಣ ಪತ್ರವನ್ನು ನೀಡಿದೆ. ಅಗ್ನಿ ಶ್ರೀಧರ್ ಅವರ 'ದಾದಾಗಿರಿಯ ದಿನಗಳು' ಕೃತಿ ಆಧಾರಿತ ಚಿತ್ರದಲ್ಲಿ ವಿಜಯ್ ಹಾಗೂ ಶುಭಾ ಪೂಂಜಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ತಮ್ಮ ಚೊಚ್ಚಲ ಚಿತ್ರ U/A ಪ್ರಮಾಣ ಪತ್ರ ಪಡೆದಿರುವ ಬಗ್ಗೆ ತಮಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ನಿರ್ದೇಶಕಿ ಸುಮನಾ ಕಿತ್ತೂರು ಪ್ರತಿಕ್ರಿಯಿಸಿದರು. ಚಿತ್ರದ ಕೆಲವೊಂದು ಸನ್ನಿವೇಶಗಳಲ್ಲಿ ಧೂಮಪಾನ ಹಾಗೂ ಮದ್ಯ ಸೇವಿಸುವ ದೃಶ್ಯಗಳಿರುವ ಕಾರಣ ಪ್ರಾದೇಶಿಕ ಸೆನ್ಸಾರ್ ಮಂಡಳಿ U/A ಪ್ರಮಾಣ ಪ್ರತ್ರ ನೀಡಿರುವುದಾಗಿ ತಿಳಿಸಿದೆ. ಚಿತ್ರದಲ್ಲಿನ ಯಾವುದೇ ದೃಶ್ಯಗಳಿಗೂ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗ ಮಾಡದಿರುವ ಬಗ್ಗೆ ಸುಮನಾ ಕಿತ್ತೂರು ಹರ್ಷ ವ್ಯಕ್ತಪಡಿಸಿದರು.

ಅಗ್ನಿ ಶ್ರೀಧರ್ ಚಿತ್ರಕಥೆ, ಸಂಭಾಷಣೆ ಬರೆದಿರುವ 'ಸ್ಲಂ ಬಾಲ'ನಿಗೆ ರವೀಂದ್ರ ಮತ್ತು ಸೈಯದ್ ಅಮಾನ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಎ.ಸಿ.ಮಹೇಂದರ್ ಛಾಯಾಗ್ರಹಣ, ಅರ್ಜುನ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ತಾರಾಬಳಗದಲ್ಲಿ ಗಿರಿಜಾ ಲೋಕೇಶ್, ಶಶಿಕುಮಾರ್, ಅಚ್ಯುತ್, ಧರ್ಮಾ, ಬಿ.ಸುರೇಶ್, ಸತ್ಯಾ ಮುಂತಾದವರು ಇದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಅಗ್ನಿ ಶ್ರೀಧರ್ ಬತ್ತಳಿಕೆಯಲ್ಲಿನ ಹೊಸ ಅಸ್ತ್ರ!
ಮುಕ್ತಾಯ ಹಂತಕ್ಕೆ ವಿಜಯ್ ನಟನೆಯ ಸ್ಲಂ ಬಾಲ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada