»   » ತೆಲುಗು ಬೃಂದಾವನಂ ರೀಮೇಕ್‌ಗೆ ದರ್ಶನ್ ಹೀರೋ

ತೆಲುಗು ಬೃಂದಾವನಂ ರೀಮೇಕ್‌ಗೆ ದರ್ಶನ್ ಹೀರೋ

Posted By:
Subscribe to Filmibeat Kannada

ತೆಲುಗು ಚಿತ್ರರಂಗದಲ್ಲಿ ಭರ್ಜರಿ ಹಿಟ್ ದಾಖಲಿಸಿದ 'ಬೃಂದಾವನಂ' ಚಿತ್ರ ಕನ್ನಡಕ್ಕೆ ರೀಮೇಕ್ ಆಗಲಿದೆ. ಜೂನಿಯರ್ ಎನ್ಟಿಆರ್ ಅಭಿನಯದ ಈ ಚಿತ್ರದಲ್ಲಿ ಕಾಜಲ್ ಅಗರವಾಲ್, ಸಮಂತಾ ಹಾಗೂ ಪ್ರಕಾಶ್ ರೈ ಸೇರಿದಂತೆ ಹಲವರು ಅಭಿನಯಿಸಿದ್ದರು.

ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿರುವವರು ನಿರ್ಮಾಪಕ ಸುರೇಶ್ ಗೌಡ. ಇವರು ಈ ಹಿಂದೆ ದರ್ಶನ್ ಮುಖ್ಯಭೂಮಿಕೆಯಲ್ಲಿದ್ದ 'ಗಜ' ಚಿತ್ರದನ್ನು ನಿರ್ಮಿಸಿದ್ದರು. ಈ ಚಿತ್ರದ ರೀಮೇಕ್ ರೈಟ್ಸ್ ಸದ್ಯಕ್ಕೆ 'ಆಪ್ತ ರಕ್ಷಕ' ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್ ಬಳಿ ಇವೆ.

ಪ್ರಜ್ವಲ್ ಅವರಿಂದ ಸುರೇಶ್ ಗೌಡ ರೀಮೇಕ್ ಹಕ್ಕುಗಳನ್ನು ಖರೀದಿಸಲು ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು. ಈ ಚಿತ್ರಕ್ಕೆ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಬುದು ಸದ್ಯದ ಮಾಹಿತಿ. ಇಬ್ಬರು ನಾಯಕಿಯರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಬಹುಶಃ ಈ ಚಿತ್ರದ ಇದೇ ವರ್ಷ ಸೆಟ್ಟೇರುವ ಸಾಧ್ಯತೆಗಳಿವೆ. (ಏಜೆನ್ಸೀಸ್)

English summary
Telugu hit Brindavanam to remade in kannada, Challenging Star Darshan is all set to work in the film. The original version had Jr. Ntr, Kajal Aggarwal and Samantha in the lead
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada