ತಮಿಳಿನಲ್ಲಿ ವಿಷ್ಣುವರ್ಧನ್ ರೀಮೇಕ್: ವಿಜಯ್ or ಕಾರ್ತಿ?
ಕನ್ನಡದಲ್ಲಿ ಯಶಸ್ವಿ ಎನಿಸಿಕೊಂಡು ಪ್ರದರ್ಶನವಾಗುತ್ತಿರುವ ಚಿತ್ರ 'ವಿಷ್ಣುವರ್ಧನ' ಈಗ ತಮಿಳು ಭಾಷೆಯಲ್ಲೂ ನಿರ್ಮಾಣವಾಗಲಿದೆ. ಈಗಾಗಲೇ ತೆಲುಗು, ಬಾಲಿವುಡ್ ಗೆ ರೀಮೇಕ್ ಆಗಲಿರುವುದು ಸುದ್ದಿಯಾಗಿದೆ. ಇದೀಗ ತಮಿಳಿನಲ್ಲೂ ಇದನ್ನು ದ್ವಾರಕೀಶ್ ಮಗ ಯೋಗೀಶ್ ನಿರ್ಮಾಣ ಮಾಡಲಿದ್ದಾರೆ.
ನಿರ್ದೇಶಕ ಪಿ. ಕುಮಾರ್ ತಮ್ಮ ಗುರುಗಳಾದ ಕೆ ಎಸ್ ರವಿಕುಮಾರ್ ಹಾಗೂ ಕೆ ಭಾರದ್ವಾಜ್ ಅವರಿಗೆ ಈ ಚಿತ್ರವನ್ನು ತೋರಿಸಿ ಭೇಷ್ ಅನ್ನಿಸಿಕೊಂಡಿದ್ದಾರೆ. ಚಿತ್ರಕಥೆ ಚೆನ್ನಾಗಿದೆ ಹಾಗೂ ತಮಿಳಿನಲ್ಲಿ ಇದನ್ನು ಮರುನಿರ್ಮಾಣ ಮಾಡಬಹುದೆಂಬ ಅವರ ಸಲಹೆಯ ಮೇರೆಗೆ ಕುಮಾರ್ ಈ ವಿಷಯವನ್ನು ಘೋಷಿಸಿದ್ದಾರೆ.
ಕನ್ನಡದಲ್ಲಿ ಸುದೀಪ್ ಪೋಷಿಸಿದ ಪಾತ್ರವನ್ನು ತಮಿಳಿನಲ್ಲಿ ಮಾಡಲು ವಿಜಯ್ ತಮ್ಮ ಆಯ್ಕೆ ಎಂದು ಗುರವಿಗೆ ತಿಳಿಸಿದ ಕುಮಾರ್ ಗೆ, ರವಿಕುಮಾರ್ "ಈ ಪಾತ್ರವನ್ನು ನಟ ಸೂರ್ಯ ತಮ್ಮ 'ಕಾರ್ತಿ' ಮಾಡಿದರೆ ಸೂಕ್ತ ಎಂದಿದ್ದಾರೆ. ಹಾಗಾಗಿ, ತಮಿಳಿನಲ್ಲಿ 'ವಿಷ್ಣುವರ್ಧನ' ಆಗಲಿರುವವರು ವಿಜಯ್ ಅಥವಾ ಕಾರ್ತಿ ಇಬ್ಬರಲ್ಲಿ ಯಾರು ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ನಟಿಯರಾದ ಭಾವನಾ, ಪ್ರಿಯಾಮಣಿ ಅಲ್ಲೂ ಇರಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











