»   » ರಜನಿಕಾಂತ್ ರೊಂದಿಗೆ ಕೈಜೋಡಿಸಿದ ವಿಷ್ಣು

ರಜನಿಕಾಂತ್ ರೊಂದಿಗೆ ಕೈಜೋಡಿಸಿದ ವಿಷ್ಣು

Subscribe to Filmibeat Kannada
Vishnuvadhan join hands with Rajinikanth
ಹಳೆಯ ಗೆಳೆಯರಾದ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಮತ್ತೆ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆಯೇ? ಹೌದು ಎನ್ನುತ್ತದೆ ತಮಿಳು ಚಿತ್ರರಂಗದ ಮೂಲಗಳು.

ಎಂಬತ್ತರ ದಶಕದಲ್ಲಿ ರಜನಿಕಾಂತ್ ಹಾಗೂ ಶಿವಾಜಿ ಗಣೇಶನ್ ತಮಿಳಿನ 'ವಿಡುದಲೈ'ಎಂಬ ಚಿತ್ರದಲ್ಲಿ ನಟಿಸಿದ್ದರು.ಈಗ ಅದೇ ರೀತಿಯ ಪಾತ್ರದಲ್ಲಿ ರಜನಿಯೊಂದಿಗೆ ವಿಷ್ಣು ನಟಿಸಲಿದ್ದಾರೆ ಎಂಬ ಸುದ್ದಿ ಹರಿದುಬಂದಿದೆ. ತಮಿಳು ಚಿತ್ರರಂಗದ ಮೂಲಗಳ ಪ್ರಕಾರ ವಿಷ್ಣುವರ್ಧನ್ ತಮಿಳಿನ 'ಎಂದಿರನ್' ಚಿತ್ರದಲ್ಲಿ ನಟಿಸಲು ಈಗಾಗಲೇ ಸಹಿ ಹಾಕಿದ್ದಾರಂತೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಜನಿಕಾಂತ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಅಯ್ಯಂಗಾರನ್ ಇಂಟರ್ ನ್ಯಾಷನಲ್ ಎಂಬ ಸಂಸ್ಥೆ ನಿರ್ಮಿಸಲಿರುವ ಭಾರಿ ಬಜೆಟ್ ನ ಎಂದಿರನ್ ಚಿತ್ರ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ. 'ಸಹೋದರರ ಸವಾಲ್' ಸೇರಿದಂತೆ ಹಲವಾರು ಕನ್ನಡಚಿತ್ರಗಳಲ್ಲಿ ರಜನಿ ಹಾಗೂ ವಿಷ್ಣು ಒಟ್ಟಿಗೆ ನಟಿಸಿದ್ದನ್ನು ಸ್ಮರಿಸಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada