ನೆಟ್ ಸಂಪರ್ಕ ಇಲ್ಲದೆ ರಜನಿ ವೆಬ್ ಸೈಟ್ ನೋಡಿ!
ಫ್ಲಾಶ್ ಆಧಾರಿತ ಈ ವೆಬ್‌ಸೈಟ್‌ನ ಮುಖಪುಟ ಆರಂಭದ ಪುಟಕ್ಕೆ ಹೋದ ನಂತರ ನೀವು ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಿದರೆ ಮಾತ್ರ ಮುಂದಿನ ಪುಟ ನೋಡಲು ಸಾಧ್ಯ.
ಗುರು ಭಕ್ತ್ ಸಿಂಗ್ ಎಂಬ ರಜನಿ ಬಾಬಾ ಭಕ್ತ ಈ ರೀತಿಯ ವಿಶಿಷ್ಟವಾದ ವೆಬ್ ತಾಣವನ್ನು ವಿನ್ಯಾಸಗೊಳಿಸಿದ್ದಾರೆ.
ಈ ವೆಬ್‌ಸೈಟ್: http://www.desimartini.com/allaboutrajni.htm ಗೆ ಭೇಟಿ ಕೋಡಿ.
'ಈತ ಸಾಮಾನ್ಯನಲ್ಲ, ಈ ವೆಬ್‌ಸೈಟ್ ಸಾಮಾನ್ಯವಾದುದಲ್ಲ. ಇದು ರಜನಿ ಶಕ್ತಿಯಿಂದ ನಡೆಯುತ್ತದೆ' ಎಂಬ ಸಂದೇಶ ಕಾಣಿಸುತ್ತದೆ. ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ ಎಂಬ ಸಂದೇಶವೂ ಕಾಣಿಸಿಕೊಳ್ಳುತ್ತದೆ.
ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿದರೆ ಮಾತ್ರ ರಜನಿ ವೆಬ್‌ಸೈಟ್‌ನ ಇತರೆ ಪುಟಗಳು ತೆರೆದುಕೊಳ್ಳುತ್ತದೆ.
ಆದರೆ, ಈ ಮಧ್ಯೆ ಇಂಟರ್ನೆಟ್ ಸಂಪರ್ಕ ಪುನಃ ಸ್ಥಾಪಿಸಿದರೆ 'ayyo... ದಟ್ ವಾಸ್ ಅನ್ ಎಕ್ಸ್‌ಪೆಕ್ಟೆಡ್' ಎಂದು ಮೆಸೇಜ್ ತೆರೆ ಮೇಲೆ ಅಪ್ಪಳಿಸುತ್ತದೆ.
ಈ ವೆಬ್ ತಾಣ ಈಗಾಗಲೇ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಕಿಚ್ಚು ಹಬ್ಬಿಸುತ್ತಿದೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ.


Click it and Unblock the Notifications












