For Quick Alerts
  ALLOW NOTIFICATIONS  
  For Daily Alerts

  'ಟೂರಿಂಗ್ ಟಾಕೀಸ್': ಒಂದೇ ಸಿನಿಮಾ ಸುತ್ತ...!

  By Staff
  |

  ಕ್ರೆಡಿಟ್ ಕಾರ್ಡ್ ಅಥವಾ ನಗದಿನ ಮೂಲಕ ಟಿಕೆಟ್ ಖರೀದಿಸುತ್ತೇವೆ. ಸಿನೆಮಾ ನೋಡಿ ಹೊರಬರುತ್ತೇವೆ.ನೋಡಿದ ಸಿನೆಮಾ ಬಗ್ಗೆ ಎರಡು ಮಾತನಾಡಿ ಒಂದು ಕಡೆ ಸರಾಸರಿ ಪ್ರೇಕ್ಷಕನಾಗಿ ಉಳಿದು, ನಾವು ಆಡಿದ ಮಾತುಗಳೆಲ್ಲ ಆಳವಾದ ವಿಮರ್ಶೆ ಎಂದೇ ಭಾವಿಸಿ ಬಿಡುತ್ತೇವೆ. ಇದು ಅಹಂಕಾರ ಎಂದು ಕೂಡ ನಮ್ಮ ಅರಿವಿಗಿರುವುದಿಲ್ಲ. ಇದು ನಮ್ಮಲ್ಲಿ ಅನೇಕರ, ಬಹುಸಂಖ್ಯಾತರ ಸತ್ಯ. ಹೆಚ್ಚಿನ ಮಟ್ಟಿಗೆ ಯುವ ಪ್ರೇಕ್ಷಕನನ್ನು ವ್ಯಾಖ್ಯಾನಿಸಲು ಬಳಸಬಹುದಾದ ಸಾರ್ವತ್ರಿಕಗೊಂಡಿರುವ ಸತ್ಯ.

  ಸಿನೆಮಾ ನೋಡಲು ಬೇಕಾಗಿರುವ ನಮ್ರತೆ, ವಿನಯ, ಸಿನೆಮಾ ನಿಶ್ಯಬ್ದವಾಗಿ, ಉಳಿದು ಹೇಳುತ್ತಾ ಹೋಗುವುದನ್ನು ಗ್ರಹಿಸಲು ಬೇಕಾಗಿರುವ ಶಿಸ್ತು ಇಲ್ಲವಾಗಿವೆ ಎಂಬ ಕೊರತೆ ನಮ್ಮಲ್ಲಿ ಬಹಳಷ್ಟು ಜನರನ್ನ ಕಾಡುತ್ತಿದೆ. ಆ ಕೊರತೆ ನೀಗಿಸಲು, ಸಿನೆಮಾ ವ್ಯಾಕರಣದ ಅಕ್ಷರಾಭ್ಯಾಸಕ್ಕಾಗಿ ಒಂದು ಪಠ್ಯಕ್ರಮವನ್ನು ಸಂವಾದ ಡಾಟ್ ಕಾಂ ಆಯೋಜಿಸಿದೆ.

  ಸಿನೆಮಾಕ್ಕೂ ಸಿಲಬಸ್ಸೆ/ಪಠ್ಯಕ್ರಮವೆ?
  ಸಿನೆಮಾಕ್ಕೂ ಒಂದು ವ್ಯಾಕರಣವಿದೆ; ಶಿಸ್ತಿದೆ. ಸಿನೆಮಾ ಗ್ರಹಿಸಲು ಬೇಕಾಗುವ ಶಿಸ್ತನ್ನು ರೂಢಿಸಿಕೊಳ್ಳಲು ವಾಚ್ಯ ಅವಾಚ್ಯಗಳ ನಡುವೆ ಬೇರೆಯದೇ ಅರ್ಥ ಲೋಕವನ್ನು ಬಗೆದಿಡುವ ವ್ಯಾಕರಣದ ಅರಿವು ಇರಬೇಕಾಗುತ್ತದೆ. ಉದಾಹರಣೆಗೆ ಜನಪ್ರಿಯ ಸಿನೆಮಾ 'ಮುಂಗಾರುಮಳೆ"ಯ ವಾಚ್ಯಾರ್ಥವೇ ಬೇರೆ, ಗೂಡಾರ್ಥವೇ ಬೇರೆ. ಒಂದು ವ್ಯಾಖ್ಯಾನದಂತೆ "ಕುರುಡರು ನಡೆಸಿದ ದರ್ಬಾರು" ಇನ್ನೊಂದು ರೀತಿಯಲ್ಲಿ ಬರಗಾಲದ ನಡುವೆ ಹೊಯ್ದ ತುಂತುರು ಹನಿ.

  ಶಿಬಿರದಲ್ಲಿ ಏನಿರುತ್ತೆ?
  ಮೂರು ದಿನವೂ ಯಾವುದಾದರೂ 'ಒಂದೇ ಸಿನಿಮಾವನ್ನು" ಪಠ್ಯಕ್ರಮವೆಂದು ಭಾವಿಸಲಾಗುವುದು. ಸಿನೆಮಾದ ಬಗ್ಗೆ ಚರ್ಚಿಸಲಾಗುತ್ತದೆ. ಸಿನೆಮಾದ ಎಲ್ಲಾ ಮುಖಗಳನ್ನು, ಅದರ ಎಲ್ಲಾ ಆಯಾಮಗಳನ್ನು , ಸಿನೆಮಾ ಮಾಧ್ಯಮದ ಕುರಿತು ಆಳವಾದ ಜ್ಞಾನವುಳ್ಳ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳ ಮುಂದಿಡುತ್ತಾರೆ. ಪತ್ರಕರ್ತರಾದ ರಘುನಾಥ ಚ ಹ, ವಿಶಾಖ , ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ತಾರಕೇಶ್ವರ್, ಫ್ರೆಂಚ್ ಭಾಷಾ ಉಪನ್ಯಾಸಕ ಡೇವಿಡ್ ಬಾಂಡ್ ಮತ್ತು ನಟ, ನಿರ್ದೇಶಕ ಬಿ ಸುರೇಶ್ ಚರ್ಚೆಯಲ್ಲಿ ಪಾಲ್ಗೊಳ್ಳುವ ಸಂಪನ್ಮೂಲ ವ್ಯಕ್ತಿಗಳು.

  ಎಲ್ಲಿ? ಯಾವಾಗ?
  ಮೇ 1, ಮೇ 2 ಮತ್ತು ಮೇ 3, 2009 ರಜಾದಿನಗಳಲ್ಲಿ ಓದೇಕಾರ್ ಫಾರಂ, ನಂದಿ ಹಳ್ಳಿ (ತೋವಿನಕೆರೆ ಬಳಿ) ತುಮಕೂರಿನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ಶಿಬಿರ ನಡೆಯಲಿದೆ. ಈ ವಿಶಿಷ್ಠ , ವಿನೂತನ ಕಾರ್ಯಕ್ರಮಕ್ಕೆ ಭಾಗವಹಿಸುವ ಆಸಕ್ತಿ ಇದ್ದರೆ ಈ ಕೆಳಗಿನ ಸಂವಾದ ಡಾಟ್ ಕಾಂ ಸದಸ್ಯರನ್ನ ಸಂಪರ್ಕಿಸಿ. 50 ಜನರಿಗೆ ಮಾತ್ರ ಪ್ರವೇಶ.

  ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
  ಕಿರಣ್ ಎಮ್: 9742055966 (ಪದ್ಮನಾಭನಗರ); ರಾಘವ ಕೋಟೆಕರ್: 9901399671 (ಜೆ ಪಿ ನಗರ, ಜಯನಗರ, ಬನಶಂಕರಿ); ಅರೆಹಳ್ಳಿ ರವಿ: 9900439930 (ಬಿ ಟಿ ಎಂ ಲೇ‌ಔಟ್, ಹೊಸೂರು ರಸ್ತೆ); ರುದ್ರಮೂರ್ತಿ: 9480494135(ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ನೆಲಮಂಗಲ); ಪ್ರಮೋದ್: 9448701470 (ಬಸವನಗುಡಿ); ರಾಜಕುಮಾರ್ (ಸಮಾಜ ಸೇವಕರ ಸಮಿತಿ): 9448171069; ಕೋಟೆ ನಾಗಭೂಷಣ್, ಪ್ರಜಾಪ್ರಗತಿ ದಿನಪತ್ರಿಕೆ 9880018381(ತುಮಕೂರಿನ ಆಸಕ್ತರು); ಅವಿನಾಶ್ : 9480138034(ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಆಸಕ್ತರು); ಪ್ರಭಾಕರ್: 9448365816(ಹಾಸನದ ಆಸಕ್ತರು). ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿ ನೋಂದಾಯಿಸಿಕೊಳ್ಳಬಹುದು.


  (ದಟ್ಸ್ ಕನ್ನಡ ಚಿತ್ರವಾರ್ತೆ)

  ಇದನ್ನೂ ಓದಿ

  ಕನ್ನಡಕ್ಕೆ ತಮಿಳಿನ ದಿಂಡಿಗಲ್ ಸಾರಥಿ ರೀಮೇಕ್</a><br><a href=ರಜನಿ ಚಿತ್ರಕ್ಕೆ ಮೈಸೂರಿನಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್
  ಜಸ್ಟ್ ಮಾತ್ ಮಾತಲ್ಲಿ ಒಂದಾದ ಸುದೀಪ್, ರಮ್ಯಾ!
  ಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'" title="ಕನ್ನಡಕ್ಕೆ ತಮಿಳಿನ ದಿಂಡಿಗಲ್ ಸಾರಥಿ ರೀಮೇಕ್
  ರಜನಿ ಚಿತ್ರಕ್ಕೆ ಮೈಸೂರಿನಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್
  ಜಸ್ಟ್ ಮಾತ್ ಮಾತಲ್ಲಿ ಒಂದಾದ ಸುದೀಪ್, ರಮ್ಯಾ!
  ಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'" />ಕನ್ನಡಕ್ಕೆ ತಮಿಳಿನ ದಿಂಡಿಗಲ್ ಸಾರಥಿ ರೀಮೇಕ್
  ರಜನಿ ಚಿತ್ರಕ್ಕೆ ಮೈಸೂರಿನಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್
  ಜಸ್ಟ್ ಮಾತ್ ಮಾತಲ್ಲಿ ಒಂದಾದ ಸುದೀಪ್, ರಮ್ಯಾ!
  ಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X