For Quick Alerts
  ALLOW NOTIFICATIONS  
  For Daily Alerts

  ಪುನೀತ್ ಗಾಗಿ ಯೋಗರಾಜ್ ಭಟ್, ನಾಗಶೇಖರ್ ಸಮರ

  |

  ಪುನೀತ್ ರಾಜ್ ಕನ್ನಡ ಚಿತ್ರರಂಗದ ಚಿನ್ನದ ಓಡುವ ಕುದರೆ, ಚಿನ್ನದ ನಟ. ಮಾಡಿದ ಚಿತ್ರವೆಲ್ಲಾ ಮಾಸ್ ಹಾಗೂ ಕ್ಲಾಸ್ ಜನರಿಗೆ ಇಷ್ಟವಾಗಿ ಈ ನಟ ಮುಟ್ಟಿದ್ದೆಲ್ಲ ಚಿನ್ನ, ಸಿನಿಮಾ ಎಲ್ಲ ಚೆನ್ನ ಎಂಬಂತಾಗಿದೆ. ಅವರ ಇತ್ತೀಚಿನ ಪರಮಾತ್ಮ ಕೂಡ ಜನರಿಗೆ ತೀರಾ ಇಷ್ಟವಾಗದಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಂಡಿದೆ. ಕನ್ನಡದಲ್ಲಿ 3 ಕೋಟಿ ಸಂಭಾವನೆ ಪಡೆಯುವ ನಟರಲ್ಲಿ ಪುನೀತ್ ಒಬ್ಬರು.

  ಈಗ ವಿಷಯ ಏನೆಂದರೆ, ಈ ಪುನೀತ್ ಕಾಲ್ ಶೀಟ್ ಗಾಗಿ ಕನ್ನಡದ ಜನಪ್ರಿಯ ನಿರ್ದೇಶಕರ ನಡುವೆ ತೆರೆಮರೆಯ ಗುದ್ದಾಟ ಪ್ರಾರಂಭವಾಗಿದೆ. ನಾಗಶೇಖರ್ ಈಗಾಗಲೇ 'ಆಂಜನೇಯ' ಎಂಬ ಶೀರ್ಷಿಕೆಯಿಟ್ಟು ಕಥೆ, ಚಿತ್ರಕಥೆ ಸಮೇತ ಪುನೀತ್ ರಾಜ್ ಜೊತೆ ಮಾತಾಡಿದ್ದಾಗಿದೆ. ಪುನೀತ್ ಚಿತ್ರಕಥೆಯಲ್ಲಿ ಕೆಲವೊಂದು ಬದಲಾವಣೆ ಸೂಚಿಸಿ ಮತ್ತೆ ಚಿತ್ರಕಥೆ ಮಾಡಲು ಹೇಳಿದ್ದೂ ಆಗಿದೆ. ಮುಂದಿನದು ಮಂದೆ.

  ಆದರೆ ಯೋಗರಾಜ್ ಭಟ್ಟರ 'ಜೈ ಭಜರಂಗಬಲಿ' ಶೀರ್ಷಿಕೆಯ ಕಥೆಯನ್ನು ಪುನೀತ್ ಇನ್ನೂ 'ಓಕೆ' ಮಾಡಿಲ್ಲ. ಕಾರಣ, ಬಾಕ್ಸ್ ಆಫೀಸ್ 'ಹಿಟ್' ಆಗಿದ್ದರೂ ಪರಮಾತ್ಮ ಜನರನ್ನು ಮೆಚ್ಚಿಸುವಲ್ಲಿ ವಿಫಲವಾಗಿದ್ದು. ಆದರೆ ಭಟ್ಟರ ಮೊದಲಿನ ಖ್ಯಾತಿಯನ್ನು ಮರೆಯುವಂತಿಲ್ಲ. ಇದೀಗ ಈ ಇಬ್ಬರು ನಿರ್ದೆಶಕರಲ್ಲಿ ಯಾರ ಕಥೆಗೆ ಪುನೀತ್ 'ಕಾಲ್ ಶೀಟ್' ಕೊಡುತ್ತಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್. (ಒನ್ ಇಂಡಿಯಾ ಕನ್ನಡ)

  English summary
  Yogaraj Bhat and Nagashekar seem to be in a war for making Puneet Rajkumar starrer film. The filmmakers, who have approached the Power star for their projects, are in the race to direct the Kannada superstars next movie.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X