»   » ಪ್ರಶಸ್ತಿ ಕೊಟ್ಟು ಕೈ ತೊಳೆದುಕೊಂಡರೆ ಸಾಕು ಎಂಬಂತೆ ಸರ್ಕಾರ ಆಯೋಜಿಸಿದ್ದ ಪೇಲವ ಸಮಾರಂಭದಲ್ಲಿ ಕೃಷ್ಣ ಇದ್ದದ್ದು ಅರ್ಧ ತಾಸು ಮಾತ್ರ.

ಪ್ರಶಸ್ತಿ ಕೊಟ್ಟು ಕೈ ತೊಳೆದುಕೊಂಡರೆ ಸಾಕು ಎಂಬಂತೆ ಸರ್ಕಾರ ಆಯೋಜಿಸಿದ್ದ ಪೇಲವ ಸಮಾರಂಭದಲ್ಲಿ ಕೃಷ್ಣ ಇದ್ದದ್ದು ಅರ್ಧ ತಾಸು ಮಾತ್ರ.

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ತಮ್ಮ ಔಪಚಾರಿಕ ಕೆಲಸ ಮುಗಿಸಿ ಕೃಷ್ಣ ಸಮಾರಂಭದಿಂದ ಹೊರನಡೆದರು. ಉಳಿದ ಪ್ರಶಸ್ತಿಗಳನ್ನು ರಾಜ್ಯ ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಪ್ರದಾನ ಮಾಡಿದರು. ಮುಂದಿನ ವರ್ಷ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಬೇಕೆಂಬ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ರಮೇಶ್‌ ಆಗ್ರಹಕ್ಕೆ ಸ್ಪಂದಿಸಲು ಕಾಗೋಡು ಒಪ್ಪಿದರು. ಈ ಬಾರಿ ಬರ ಪರಿಸ್ಥಿತಿಯ ಕಾರಣ ಈ ಕೆಲಸ ಮಾಡಲಾಗಲಿಲ್ಲ. ಮುಂದಿನ ವರ್ಷದಿಂದ ರಾಜ್ಯದ ಇತರೆ ಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸುತ್ತೇವೆ. ಈ ಬಾರಿ ನಮ್ಮ ಬಳಿ ಹೆಚ್ಚು ಸಮಯವಿರಲಿಲ್ಲ. ಹಾಗಾಗಿ ತರಾತುರಿಯಲ್ಲಿ ಈ ಸಮಾರಂಭ ಮಾಡಬೇಕಾಯಿತು. ಚಿತ್ರೋದ್ಯಮದ ಮಂದಿಯ ಸಹಕಾರಕ್ಕೆ ಸರ್ಕಾರ ಸದಾ ಸಿದ್ಧ ಎಂದು ಕಾಗೋಡು ಕೃಷ್ಣ ಮಾತನ್ನು ಪುನರುಚ್ಚರಿಸಿದರು.

ಕಾರ್ಯಕ್ರಮಕ್ಕೆ ಮುನ್ನ ದೀಪದ ವ್ಯವಸ್ಥೆಯನ್ನೇ ಸರಿಯಾಗಿ ನೋಡಿಕೊಂಡಿರಲಿಲ್ಲ. ಮನರಂಜನೆ ಕಾರ್ಯಕ್ರಮಗಳ ನಿರ್ವಹಣೆಯಲ್ಲೂ ಏರುಪೇರು ಕಂಡುಬಂತು. ನಿರೂಪಕಿಯಾಗಿ ಅಪರ್ಣಾ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಇಡೀ ಸಮಾರಂಭದ ವ್ಯವಸ್ಥೆ ಸರ್ಕಾರದ ಕಾಟಾಚಾರದ ಧೋರಣೆಗೆ ಕನ್ನಡಿ ಹಿಡಿದಂತಿತ್ತು.

ಪೂರಕ ಓದಿಗೆ-
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada