»   » ಶಾರೂಖ್‌ರ ‘ಕೆಬಿಸಿ’ಯಲ್ಲಿ ರಾಣಿ ಮತ್ತು ಪ್ರೀತಿ ಜಿಂಟಾ

ಶಾರೂಖ್‌ರ ‘ಕೆಬಿಸಿ’ಯಲ್ಲಿ ರಾಣಿ ಮತ್ತು ಪ್ರೀತಿ ಜಿಂಟಾ

Subscribe to Filmibeat Kannada


ಮುಂಬಯಿ : ಬಿಗ್‌ ಬಾಸ್‌ ಅಮಿತಾಭ್‌ ನಂತರ ‘ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮ, ಶಾರೂಖ್‌ ಖಾನ್‌ ಸಾರಥ್ಯದಲ್ಲಿ ಮುನ್ನುಗ್ಗುತ್ತಿದೆ. ಶಾರೂಖ್‌ ಬಂದ ಮೇಲೆ, ಸ್ಪರ್ಧಿಗಳ ಸೀಟಿನಲ್ಲಿ ಬಾಲಿವುಡ್‌ ತಾರೆಯರು ಕೂರುತ್ತಿದ್ದಾರೆ. ಆ ಪರಿಣಾಮ ತಾರಾರಂಗು ಹೆಚ್ಚುತ್ತಿದೆ.

ಸ್ಟಾರ್‌ಪ್ಲಸ್‌ನಲ್ಲಿ ಈ ಕಾರ್ಯಕ್ರಮದ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಲೇ ಇದೆ. ಇತ್ತೀಚೆಗಷ್ಟೇ ಪ್ರೇಮಿಗಳ ದಿನದ ಅಂಗವಾಗಿ ಮೂಡಿಬಂದ ಕರೋಡ್‌ಪತಿ ಕಾರ್ಯಕ್ರಮದಲ್ಲಿ ತಾರೆಯರು ಮಿಂಚಿದ್ದರು. ಈಗ ಹೋಲಿ ಹುಣ್ಣಿಮೆಯ ಸಂದರ್ಭದಲ್ಲಿ ಮೂಡಿಬರಲಿರುವ ಕಾರ್ಯಕ್ರಮದಲ್ಲಿ, ಪ್ರೀತಿ ಜಿಂಟಾ ಮತ್ತು ರಾಣಿ ಮುಖರ್ಜಿಯನ್ನು ವೀಕ್ಷಕರು ಕಾಣಬಹುದು.

ಇವರಿಬ್ಬರೂ ಸ್ಪರ್ಧೆಯಲ್ಲಿ 50ಲಕ್ಷ ಗೆದ್ದಿದ್ದಾರೆ ಎಂದು ಮೂಲಗಳು ಹೇಳಿವೆ. ಇನ್ನು ಹೆಚ್ಚಿನ ವಿವರಗಳನ್ನು ಟೀವಿಯಲ್ಲಿಯೇ ನೋಡೋಣ.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada