»   » ಕಾಮಿಡಿ ಟೈಮ್‌ ಗಣೇಶ್‌ ಜೊತೆ ರೇಖಾ ‘ಹುಡುಗಾಟ’

ಕಾಮಿಡಿ ಟೈಮ್‌ ಗಣೇಶ್‌ ಜೊತೆ ರೇಖಾ ‘ಹುಡುಗಾಟ’

Posted By:
Subscribe to Filmibeat Kannada


ಅಂದು ‘ತುಂಟಾಟ’ವಾಯಿತು, ಆಮೇಲೆ ‘ಚೆಲ್ಲಾಟ’ವಾಯಿತು... ಈಗ ‘ಹುಡುಗಾಟ’! ಮುಂದೇನೋ?

‘ಜಿಂಕೆ ಮರಿ ಓಡ್ತಾ ಐತೆ ನೋಡ್ಲಾ ಮಗ’ ಹಾಡಿನಲ್ಲಿ ಜಿಂಕೆಯಂತೆಯೇ ಓಡಿ, ಕಾಸಗಲದ ಕಣ್ಣರಳಿಸಿ, ಎಲ್ಲರ ಕಣ್‌ಸೆಳೆದ ಕನ್ನಡದ ಹುಡುಗಿ ರೇಖಾ, ಮತ್ತೆ ತವರಿಗೆ ಬಂದಿದ್ದಾರೆ. ಅವರ ಮುಂದಿರುವ ಹೊಸ ಚಿತ್ರ ‘ಹುಡುಗಾಟ’. ಕಾಮಿಡಿ ಟೈಮ್‌ ಗಣೇಶ್‌ಗಿದು ಮೂರನೇ ಚಿತ್ರ. ರೇಖಾ-ಗಣೇಶ್‌ ಜೋಡಿಗಿದು ಎರಡನೇ ಚಿತ್ರ.

ಕೃಷ್ಣನ ಪರಮಭಕ್ತೆಯಾಗಿರುವ ರೇಖಾ, ಎಲ್ಲಾ ಯಶಸ್ಸಿಗೂ ಕೃಷ್ಣನೇ ಕಾರಣ ಎನ್ನುತ್ತಾರೆ. ಕೃಷ್ಣನ ಆಶೀರ್ವಾದವಿಲ್ಲದಿದ್ದರೆ ಏನೂ ಸಾಧ್ಯವಿಲ್ಲ ಎನ್ನುತ್ತಾರೆ. ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಅಭಿಮಾನಿಗಳ ಸಂಪಾದಿಸಿರುವ ರೇಖಾ, ನೋಡ್ತಾನೋಡ್ತಾನೇ ಸಿನಿಬದುಕಿನಲ್ಲಿ ಕಾಲು ಶತಕ(25 ಚಿತ್ರಗಳು) ಪೂರೈಸಿದ್ದಾರೆ. ಎಲ್ಲವೂ ಕೃಷ್ಣನ ದಯೆ!

ಸುದೀಪ್‌ ಜೊತೆಗಿನ ‘ಹುಚ್ಚ’, ಇಂದ್ರಜಿತ್‌ ಲಂಕೇಶ್‌ರ ‘ತುಂಟಾಟ’, ಮೊನ್ನೆಯ ‘ಚೆಲ್ಲಾಟ’ ಹೀಗೆ ಸಾಲು ಸಾಲು ಚಿತ್ರಗಳು ಗೆದ್ದರೂ, ರೇಖಾ ಕನ್ನಡದಲ್ಲಿ ನೆಲೆ ನಿಲ್ಲಲಿಲ್ಲ. ಇನ್ನಾದರೂ ‘ಹುಡುಗಾಟ ನಿಲ್ಲಿಸಲಿ’!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada