»   » ನಾಗತಿಹಳ್ಳಿ ಯಶೋಗಾಥೆ : ಬೆಳ್ಳಿಹಬ್ಬ ಕಂಡ ‘ಅಮೃತಧಾರೆ’

ನಾಗತಿಹಳ್ಳಿ ಯಶೋಗಾಥೆ : ಬೆಳ್ಳಿಹಬ್ಬ ಕಂಡ ‘ಅಮೃತಧಾರೆ’

Subscribe to Filmibeat Kannada


ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ, ಹಾಡು-ನೃತ್ಯ ಮೇಳೈಸಿದ್ದವು. ಆದರೆ ಆಮಂತ್ರಿತರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ನಾಗತಿಹಳ್ಳಿ ‘ಬಿಗ್‌ ಬಿ’ಯನ್ನೂ ಕರೆಸಲಿಲ್ಲ...

ಅಮೃತಧಾರೆ ಚಲನಚಿತ್ರ 25ವಾರಗಳ ಪ್ರದರ್ಶನ ಪೂರೈಸಿದ್ದು, ಈ ನಿಮಿತ್ತ ಶನಿವಾರ(ಮಾರ್ಚ್‌ 18) ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳ್ಳಿಹಬ್ಬ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮಕ್ಕೆ ಹಿಂದಿಯ ಖ್ಯಾತನಟ ಅಮಿತಾಭ್‌ ಬಚ್ಚನ್‌ ಅವರನ್ನು ಕರೆಸುವುದಾಗಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಪ್ರಮಾಣ ಮಾಡಿದ್ದರು. ಅದು ನೆರವೇರಲಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೆಸರೂ ಆಮಂತ್ರಣ ಪತ್ರಿಕೆಯಲ್ಲಿತ್ತು. ಅವರೂ ಸಹ ಈ ಕಡೆಗೆ ತಿರುಗಿ ನೋಡಲಿಲ್ಲ.

ಇನ್ನು ಚಿತ್ರ ತಾರೆಗಳಾದ ಡಾ.ವಿಷ್ಣುವರ್ಧನ್‌, ರವಿಚಂದ್ರನ್‌, ಶಿವರಾಜ್‌ಕುಮಾರ್‌, ಪುನೀತ್‌ರಾಜ್‌ಕುಮಾರ್‌, ಉಪೇಂದ್ರ, ತಾರಾ, ಪ್ರೇಮ್‌ ಹಾಗೂ ರಕ್ಷಿತಾ ಅವರ ಹೆಸರುಗಳೂ ರಂಗುರಂಗಿನ ಆಮಂತ್ರಣ ಪತ್ರದಲ್ಲಿದ್ದವು. ಆದರೆ ಅವರೂ ಕೂಡ ಬರಲೇ ಇಲ್ಲ.

ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌, ಜ್ಞಾನಪೀಠ ಪುರಸ್ಕೃತ ಸಾಹಿತಿ ಪ್ರೊ.ಯು.ಆರ್‌.ಅನಂತಮೂರ್ತಿ, ಕವಿ-ನಾಟಕಕಾರ ಹಾಗೂ ವಿಧಾನಪರಿಷತ್‌ ಸದಸ್ಯ ಚಂದ್ರಶೇಖರ ಕಂಬಾರ, ನಟ-ವಿಧಾನಸಭಾ ಸದಸ್ಯ ಬಿ.ಸಿ.ಪಾಟೀಲ್‌ ಮತ್ತು ವಿಧಾನಪರಿಷತ್‌ ಸದಸ್ಯ-ನಟ ಮುಖ್ಯಮಂತ್ರಿ ಚಂದ್ರು, ಚಿತ್ರನಟರಾದ ಧ್ಯಾನ್‌ ಹಾಗೂ ಸುದೀಪ್‌, ನಟಿ ರಮ್ಯಾ ಮೊದಲಾದವರು ಸಮಾರಂಭದಲ್ಲಿ ಪಾಲ್ಗೊಂಡು ಸ್ಮರಣಿಕೆಗಳನ್ನು ಸ್ವೀಕರಿಸಿದರು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ, ಹಾಡು-ನೃತ್ಯ ಮೇಳೈಸಿದ್ದವು. ಸುದೀಪ್‌ ನಟಿಸಿ, ನಿರ್ದೇಶಿಸಿರುವ ‘ಮೈ ಆಟೋಗ್ರಾಫ್‌’ ಚಿತ್ರದ ‘ಸವಿಸವಿ ನೆನಪು... ಸಾವಿರ ನೆನಪು...’ ಗೀತೆಯನ್ನು ಹಾಡುವಂತೆ ನಟ ಸುದೀಪ್‌ಗೆ ಪ್ರೇಕ್ಷಕರು ಒತ್ತಾಯಪಡಿಸಿದರು. ಸುದೀಪ್‌ ಗಾಯನ ಮೆಚ್ಚಿದ ಪ್ರೇಕ್ಷಕರು, ಭಾರೀ ಕರತಾಡನದ ಉಡುಗೊರೆ ನೀಡಿದರು.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada