»   » ರಾಜ್‌ಕುಮಾರ್‌ ಮತ ಚಲಾಯಿಸಲಿಲ್ಲ !

ರಾಜ್‌ಕುಮಾರ್‌ ಮತ ಚಲಾಯಿಸಲಿಲ್ಲ !

Posted By: Staff
Subscribe to Filmibeat Kannada

ರಾಜ್‌ ಅಷ್ಟೇ ಏಕೆ, ಅವರ ಕುಟುಂಬದ ಯಾರೊಬ್ಬರೂ ಮತ ಚಲಾಯಿಸಲು ಸಾಧ್ಯವಾಗಲಿಲ್ಲ . ಕಾರಣ, ಅವರುಗಳ ಹೆಸರು ಮತ ಪಟ್ಟಿಯಲ್ಲಿ ಇರಲಿಲ್ಲ . ಗುರುತಿನ ಚೀಟಿಯಿದ್ದರೂ, ಮತಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ರಾಜ್‌ ಕುಟುಂಬ ಮತದಾನದಿಂದ ವಂಚಿತವಾಗಬೇಕಾಯಿತು.

ರಾಜ್‌ ಕುಟುಂಬದ 28 ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಆದರೆ, ಕುಟುಂಬದ ಕೆಲ ಮಂದಿ ಮತ ಚಲಾಯಿಸಲು ಬೆಂಗಳೂರಿನ ಸದಾಶಿವನಗರ ಪೂರ್ಣಪ್ರಜ್ಞ ಶಾಲೆಗೆ ಬಂದಾಗ ಅಚ್ಚರಿ ಕಾದಿತ್ತು ! ಮತ ಪಟ್ಟಿಯಲ್ಲಿ ಕುಟುಂಬದ ಎಲ್ಲ ಸದಸ್ಯರುಗಳ ಹೆಸರು ನಾಪತ್ತೆಯಾಗಿದ್ದವು. ಐದಾರು ಮತಗಟ್ಟೆ ಸುತ್ತಿದರೂ ಉಪಯೋಗವಾಗಲಿಲ್ಲ ಎಂದು ಶಿವರಾಜ್‌ಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶಿವರಾಜ್‌ ಪ್ರಕಾರ್‌- ರಾಜ್‌ ಮನೆಯಲ್ಲಿ ಕೆಲಸ ಮಾಡುವ ಎನ್‌.ರಾಜ್‌ಕುಮಾರ್‌ ಎನ್ನುವವರ ಹೆಸರು ಪಟ್ಟಯಲ್ಲಿದೆ. ಅವರು ಮತ ಚಲಾಯಿಸಿದ್ದಾರೆ. ಆದರೆ ರಾಜ್‌, ಪಾರ್ವತಮ್ಮ , ರಾಘವೇಂದ್ರ, ಪುನೀತ್‌, ಶಿವರಾಜ್‌ ಹಾಗೂ ಇತರರ ಹೆಸರೇ ನಾಪತ್ತೆ .

ಕಳೆದ ಅನೇಕ ಚುನಾವಣೆಗಳಲ್ಲಿ ಇದೇ ಮತಗಟ್ಟೆಯಿಂದ ವೋಟು ಚಲಾಯಿಸಿದ್ದೇವೆ. 1999ರ ಚುನಾವಣೆಯಲ್ಲೂ ವೋಟು ಹಾಕಿದ್ದೇವೆ. ಆದರೆ, ಈಗ ನೋಡಿದರೆ ಹೆಸರುಗಳೇ ನಾಪತ್ತೆ . ಇದರಿಂದಾಗಿ ಷಾಕ್‌ ಆಯಿತು ಎಂದು ಪಾರ್ವತಮ್ಮ ರಾಜ್‌ಕುಮಾರ್‌, ಮತದಾನ ಸಾಧ್ಯವಾಗದ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.

ದಿವಂಗತ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿಯ ವಾರಸುದಾರಿಣಿ-ನೃತ್ಯಗಾತಿ ಪ್ರತಿಭಾ ಪ್ರಹ್ಲಾದ್‌ ಅವರ ಹೆಸರು ಕೂಡ ಸದಾಶಿವನಗರದ ಮತ ಪಟ್ಟಿಯಿಂದ ಕಾಣೆಯಾಗಿತ್ತು . ವೋಟು ಹಾಕಲೆಂದೇ ದೆಹಲಿಯಿಂದ ಹಾರಿಬಂದಿದ್ದ ಪ್ರತಿಭಾ- ಮತ ಚಲಾಯಿಸಲು ಸಾಧ್ಯವಾಗದ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

English summary
Missing Names in Voter Lists, Kannada Matinee idol Dr. Rajkumar family couldn't Vote
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada