»   » ಅಬ್ಬಬ್ಬಾ.. ಅಂತೂ ಐಶ್‌-ಅಭಿ ಮದುವೆ ಮುಗಿಯಿತು!

ಅಬ್ಬಬ್ಬಾ.. ಅಂತೂ ಐಶ್‌-ಅಭಿ ಮದುವೆ ಮುಗಿಯಿತು!

Subscribe to Filmibeat Kannada


ಐಶ್‌-ಅಭಿ ಹಾರ ವಿನಿಮಯ; ಬದುಕಾಗಲಿ ರಸಮಯ..

ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ರ ಮೂರು ದಿನಗಳ ವಿವಾಹ ಮಹೋತ್ಸವಕ್ಕೆ ತೆರೆಬಿದ್ದಿದೆ.

ಈ ಮದುವೆಗಾಗಿ ಏನೇನೋ ಕಸರತ್ತುಗಳು. ಐಶ್‌ ಬೇಬಿಯ ಕುಜ ದೋಷ ನಿವಾರಣೆಗೆ ಮತ್ತು ಮದುವೆ ಕುದುರಿಸಲು ಪೂಜೆ, ಹೋಮ.. ಮಾಟ-ಮಂತ್ರ, ದೇವರ ದರ್ಶನ ಇತ್ಯಾದಿ ಇತ್ಯಾದಿ.. ಇವೇನು ಒಂದೇ ಎರಡೇ..

ಕೊನೆಗೂ ಅಕ್ಷಯ ತೃತೀಯದ ಪವಿತ್ರ ದಿನವಾದ ಶುಕ್ರವಾರ(ಏ.20) ರಾತ್ರಿ ಅಮಿತಾಭ್‌ ಬಚ್ಚನ್‌ ನಿವಾಸ ಪ್ರತೀಕ್ಷಾದಲ್ಲಿ ಪರಸ್ಪರ ಹಾರ ಬದಲಿಸಿಕೊಳ್ಳುವ ಮೂಲಕ ಈ ತಾರಾಜೋಡಿ, ತಾರಾದಂಪತಿಯಾಗಿ ಪರಿವರ್ತಿತರಾದರು. ಬನಾರಸ್‌ನಿಂದ ಆಗಮಿಸಿದ್ದ ಪುರೋಹಿತರು ಮದುವೆ ಶಾಸ್ತ್ರ ಮುಗಿಸಿದರು.

31ವರ್ಷದ ಅಭಿಷೇಕ್‌ ಬಚ್ಚನ್‌ ಮತ್ತು 33ವರ್ಷದ ಐಶ್ವರ್ಯ ರೈ ಮದುವೆಗೆ ಆಹ್ವಾನಿತರಿಗಷ್ಟೇ ಪ್ರವೇಶವಿತ್ತು. ಮಾಧ್ಯಮಗಳು ಮತ್ತು ಅಭಿಮಾನಿಗಳನ್ನು ಮದುವೆಯಿಂದ ದೂರವಿಡಲಾಗಿತ್ತು.

ಮದುವೆಗೆ ಬಂದ ಅತಿಥಿಗಳು : ಮುಲಾಯಂ ಸಿಂಗ್‌ ಯಾದವ್‌, ಸಂಜಯದತ್‌, ಅಜಯ್‌ ದೇವಗನ್‌, ಕಾಜೋಲ್‌, ಅನಿಲ್‌ ಅಂಬಾನಿ, ಅಮರ್‌ ಸಿಂಗ್‌, ಸಚಿನ್‌ ತೆಂಡೂಲ್ಕರ್‌ ಮತ್ತಿತರರು.

ಮಸಾಲಾ.. : ಅವುಗಳಲ್ಲಿ ಎಷ್ಟು ಸುಳ್ಳಿತ್ತೋ, ಎಷ್ಟು ನಿಜವಿತ್ತೋ ಗೊತ್ತಿಲ್ಲ. ಯಾರ್ಯಾರ ಜೊತೆಗೋ ಐಶ್ವರ್ಯ ಮತ್ತು ಅಭಿ ಹೆಸರನ್ನು ಸೇರಿಸಿ ಮಾಧ್ಯಮಗಳು, ಚಿತ್ರರಸಿಕರಿಗೆ ಇಷ್ಟು ದಿನ ಬಿಟ್ಟಿ ಮನರಂಜನೆ ನೀಡಿದ್ದವು.

(ದಟ್ಸ್‌ ಕನ್ನಡ ಸಿನಿಡೆಸ್ಕ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada