»   » ‘ರಾಕ್ಷಸ’ ಲೀಲೆ ಶುರುವಾಯಿತಣ್ಣ !

‘ರಾಕ್ಷಸ’ ಲೀಲೆ ಶುರುವಾಯಿತಣ್ಣ !

Posted By: Staff
Subscribe to Filmibeat Kannada
Shivrajkumar
ವರನಟ ರಾಜ್‌ಕುಮಾರ್‌ ಹುಟ್ಟುಹಬ್ಬದಂದು ಸೆಟ್ಟೇರಿದ 'ರಾಕ್ಷಸ" ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮೇ 12ರಂದು ಪ್ರಾರಂಭವಾಯಿತು. ಶಿವರಾಜ್‌ಕುಮಾರ್‌ ನಾಯಕರಾಗಿ ಅಭಿನಯಿಸುತ್ತಿರುವ 'ರಾಕ್ಷಸ" ಚಿತ್ರದ ಬಗ್ಗೆ ಉದ್ಯಮ ಅಪಾರ ನಿರೀಕ್ಷೆ ಇರಿಸಿಕೊಂಡಿದೆ. ಎಕೆ 47 ಹಾಗೂ ಸಿಂಹದ ಮರಿ ಚಿತ್ರಗಳ ನಂತರ ನಿರ್ಮಾಪಕ ರಾಮು ಹಾಗೂ ನಾಯಕ ಶಿವರಾಜ್‌ಕುಮಾರ್‌ ಸಂಗಮದ ಚಿತ್ರ 'ರಾಕ್ಷಸ". ಆ ಕಾರಣದಿಂದಾಗಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುವುದು ಸಹಜವೇ.

ರಕ್ತ ಕಣ್ಣೀರು ಚಿತ್ರದ ಮೂಲಕ ಯಶಸ್ಸು ಕಂಡ ಕೋಕಿಲ ಸಾಧು 'ರಾಕ್ಷಸ" ಚಿತ್ರದ ನಿರ್ದೇಶಕ. ಚಿತ್ರಕಥೆ ಹಾಗೂ ಸಂಗೀತ ಕೂಡ ಕೋಕಿಲ ಅವರದೇ. ಕಥೆ, ಸಂಭಾಷಣೆ-ರಂಗನಾಥ್‌, ಕೃಷ್ಣಕುಮಾರ್‌ ಛಾಯಾಗ್ರಹಣ, ಥ್ರಿಲ್ಲರ್‌ ಮಂಜು ಸಾಹಸ ಚಿತ್ರಕ್ಕಿದೆ.

ಶಿವರಾಜ್‌ಕುಮಾರ್‌ ಜೊತೆ ರಂಗಾಯಣ ರಘು, ಸುರೇಶ್‌ ಹುಬ್ಳೀಕರ್‌, ಅವಿನಾಶ್‌, ಜಿ.ಕೆ.ಗೋವಿಂದರಾವ್‌, ದತ್ತಣ್ಣ ಮುಂತಾದವರು ತಾರಾಗಣದಲ್ಲಿದ್ದಾರೆ. ನಾಯಕಿ ಇನ್ನೂ ಪಕ್ಕಾ ಆಗಿಲ್ಲ . ಯಾವುದೇ ಕ್ಷಣದಲ್ಲಿ ನಾಯಕಿಯ ಆಯ್ಕೆ ನಡೆಯಬಹುದು ಎಂಬುದು ರಾಮು ಸ್ಪಷ್ಟೀಕರಣ.

ಅಂದಹಾಗೆ, ಶಿವರಾಜ್‌ ಅಭಿನಯದ ಬಹು ನಿರೀಕ್ಷೆಯ ಚಿತ್ರ 'ಸಾರ್ವಭೌಮ" ತೆರೆಕಾಣಲು ಅಂತಿಮ ಹಂತದ ಸಿದ್ಧತೆ ನಡೆಸಿದ್ದು , ಜೂನ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಮಹೇಶ್‌ ಸುಖಧರೆ 'ಸಾರ್ವಭೌಮ"ದ ನಿರ್ದೇಶಕರು.

English summary
Shivrajkumar and Ramu's new venture 'Rakshasa' Kannada film shooting begins
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada