ರಕ್ಷಿತಾ ಜೊತೆ ರಾಧಿಕಾ!

By Staff

ಸ್ಯಾಂಡಲ್‌ವುಡ್‌ನಲ್ಲಿ ರಿಮೇಕ್‌ ಯುಗ ಆರಂಭಗೊಂಡಿದೆ. ‘ ಸಖ ಸಖಿ’ ಎನ್ನುವ ಮತ್ತೊಂದು ರಿಮೇಕ್‌ ಚಿತ್ರ ಸೆಟ್ಟೇರಿದೆ.

‘ತುಂಟಾಟ’ದ ಹುಡುಗಿ ಛಾಯಾಸಿಂಗ್‌, ‘ಬಾ ಬಾರೋ ರಸಿಕ’ ಖ್ಯಾತಿಯ ಸುನೀಲ್‌ರಾವ್‌ ‘ ಸಖ ಸಖಿ’ಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅಪ್ಪಟ ಕನ್ನಡದ ಹುಡುಗಿ ಛಾಯಾಸಿಂಗ್‌ ತವರಿಗೆ ಮರಳಿದ್ದಾಳೆ.

ತಮಿಳಿನ ಸೂಪರ್‌ಹಿಟ್‌ ಚಿತ್ರ ‘ತಿರುಡಾ ತಿರುಡಿ’ ಚಿತ್ರ ‘ ಸಖ ಸಖಿ’ ಹೆಸರಲ್ಲಿ ರಿಮೇಕ್‌ ಆಗುತ್ತಿದೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ನಿರೀಕ್ಷೆಗಳಿವೆ. ನಿಜಕ್ಕೂ ತಿರುಡಾ ತಿರುಡಿ ಚಿತ್ರದ ಹಾಡುಗಳು ಈ ಹಿಂದೆಯೇ ಕನ್ನಡ ಭಾಷೆಗೆ ರೂಪಾಂತರಗೊಂಡಿವೆ(ಈ ಚಿತ್ರದ ‘ಮನ್ಮಥ ರಾಸ...’ ಹಾಡು ಕಲಾಸಿಪಾಳ್ಯದ ‘ಸುಂಟರಗಾಳಿ...’ಯಾಗಿ ರಕ್ಷಿತಾಗೊಂದು ಇಮೇಜ್‌ ತಂದುಕೊಟ್ಟಿದೆ!). ಈಗ ಕಥೆಯಷ್ಟೇ ಕನ್ನಡಕ್ಕೆ ಬರುತ್ತಿದೆ. ‘ತಿರುಡಾ ತಿರುಡಿ’ಯಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದ ಛಾಯಾಸಿಂಗ್‌ ಆ ಪಾತ್ರವನ್ನೇ ಸಖ ಸಖಿಯಲ್ಲಿ ನಿರ್ವಹಿಸುತ್ತಿದ್ದಾರೆ.

‘ತುಂಟಾದ’ ಮತ್ತು ‘ಚಿಟ್ಟೆ ’ಚಿತ್ರಗಳಲ್ಲಿ ಪ್ರೇಕ್ಷಕರ ಗಮನ ಸೆಳೆದರೂ ಸಹಾ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳನ್ನು ಗಿಟ್ಟಿಸಲು ಛಾಯಾಗೆ ಸಾಧ್ಯವಾಗಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳಿಲ್ಲ ಎಂದು ಕೊರಗುತ್ತಲೇ ತಮಿಳು ಚಿತ್ರರಂಗ ಪ್ರವೇಶಿಸಿದ್ದ ಛಾಯಾ ಅಲ್ಲಿ ನೆಲೆಕಂಡುಕೊಂಡಿದ್ದಾರೆ. ‘ಸಖ ಸಖಿ ’ ಮೂಲಕ ತವರಲ್ಲಿ ನಟಿಸುವ ಛಾಯಾ ಆಸೆ ಕಡೆಗೂ ಫಲಿಸಿದೆ.

Post your views

‘ಛಾಯಾ’ಚಿತ್ರಗಳಿಗೆ ಇಲ್ಲಿ ಭೇಟಿ ಕೊಡಿ

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X