»   » ಚಿತ್ರ ಚಿತ್ರದ ಜಿಂಕೆಮರಿ ರೇಖಾ ಬಾಲಿವುಡ್‌ಗೆ ಲಗ್ಗೆ

ಚಿತ್ರ ಚಿತ್ರದ ಜಿಂಕೆಮರಿ ರೇಖಾ ಬಾಲಿವುಡ್‌ಗೆ ಲಗ್ಗೆ

Posted By: Staff
Subscribe to Filmibeat Kannada

ಅಂದಾನೊಂದು ಕಾಲದಲ್ಲಿ ಮೌಂಟ್‌ ಕಾರ್ಮಲ್ಲಿಯಾಗಿದ್ದ ಚಿತ್ರ ಬೆಡಗಿ, ತುಂಟಾಟದ ಹುಡುಗಿ ರೇಖಾ ನಟನಾ ಸಾಮರ್ಥ್ಯದ ಬಗ್ಗೆ ಕಾಮೆಂಟ್ಸ್‌ ಏನೇ ಇರಲಿ, ಈಕೆ ಬೆಳೆಯುತ್ತಿರುವ ವೇಗ ಮಾತ್ರ ಎಂಥವರನ್ನೂ ದಂಗು ಬಡಿಸುವಂತಿದೆ. ಕೆಲವೊಮ್ಮೆ ಪುಟ್ಟ ಹುಡುಗಿಯಂತೆ ಮಾತಾಡುವ ರೇಖಾ ಖಂಡಿತ ಮುಗ್ಧಳಲ್ಲ ಅನ್ನುವುದು ಆಕೆಯನ್ನು ಹತ್ತಿರದಿಂದ ಬಲ್ಲವರ ಮಾತು.

ಸಾಧನೆಯ ಹಾದಿಯಲ್ಲಿ ದಾಪುಗಾಲಿಟ್ಟಿರುವ ರೇಖಾ ಈಗ ಆಂಧ್ರಪ್ರದೇಶದಲ್ಲಿ ಶೂಟಿಂಗೊಂದರಲ್ಲಿ ಬ್ಯುಸಿ. ಎನ್‌.ಟಿ.ರಾಮರಾವ್‌ ಮೊಮ್ಮಗ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ನಾಯಕಿ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೂ ನಮ್ಮ ಕನ್ನಡದ ಮಾತು ಕೇಳುತ್ತಲೇ ರೇಖಾ ಖುದ್ದು ತಾವೇ ಮಾತಿಗಿಳಿದರು....

ಒಂದೇ ಒಂದು ದಿನ ರಜೆ ಸಿಕ್ಕರೆ ಸಾಕು, ಪೂರ್ತಿ ನಿದ್ರೆಯಲ್ಲೇ ಕಳೆದುಹೋಗುತ್ತೇನೆ. ಸದ್ಯಕ್ಕೆ ಅದೇ ನನ್ನ ಕನಸು.
ಹರೆಯದಲ್ಲೇ ಹುಡುಕಿಕೊಂಡು ಬಂದ ಕೈತುಂಬಾ ಕೆಲಸ. ಬೆಳಗ್ಗೆ 5 ಗಂಟೆಗೇ ಎದ್ದು ಶೂಟಿಂಗ್‌ಗೆ ರೆಡಿಯಾಗಬೇಕು. ಮನೆಯಿಂದ ದೂರದೂರಲ್ಲಿರಬೇಕು. ಇರಲು ಇಷ್ಟವಿಲ್ಲ, ಆದ್ರೆ ಏನು ಮಾಡೋದು. ಏನಾದರೂ ಸಾಧಿಸಬೇಕು ಅಂದ್ರೆ ಇರಲೇಬೇಕು.

ತುಂಟಾಟ ಮುಗಿಯಿತು ಅನ್ನುವಷ್ಟರಲ್ಲಿ ಈ ತೆಲುಗು ಚಿತ್ರದ ಆಫರ್‌ ಬಂತು. ಒಳ್ಳೆಯ ಬ್ಯಾನರ್‌. ಸದ್ದು ಮಾಡುತ್ತಿರುವ ಹೊಸ ಹೀರೋ. ಇನ್ನೇನು ಬೇಕು. ಹಿಂದೂಮುಂದೂ ನೋಡದೆ ಒಪ್ಪಿಕೊಂಡೆ. ನನಗೆ ಎಲ್ಲಾ ಭಾಷೆಯ ಒಂದೊಂದು ಚಿತ್ರದಲ್ಲಿ ನಟಿಸುವ ಆಸೆ. ಆ ಮೂಲಕ ಬಾಲಿವುಡ್‌ಗೂ ನುಗ್ಗುವ ಮಹದಾಸೆ. ನಿದ್ರೆ ಮಾಡುವುದನ್ನು ಬಿಟ್ಟರೆ, ನನ್ನ ಕನಸುಗಳಲ್ಲೊಂದು ಬಾಲಿವುಡ್‌ ನಟಿಯಾಗುವುದು.

ಇಲ್ಲಿಗೆ ಬಂದಾಗ, ಮೊದಲ ಒಂದೆರಡು ದಿನಗಳು ಖುಷ್‌ ಆಗಿದ್ದೆ. ಆಮೇಲೆ ಮನೆ ನೆನಪಾಯಿತು. ನನಗೆ ಬೇಗ ಹೋಂ ಸಿಕ್‌ ಬರುತ್ತೆ. ಆದರೆ ಕಮಿಟ್‌ಮೆಂಟಿದೆಯಲ್ಲಾ, ಓಡಿ ಹೋಗೋಕೆ ಆಗಲ್ಲ. ಇಲ್ಲಿಗೆ ಯಾರಾದರೂ ನಮ್ಮ ಕನ್ನಡದವರು ಊಟ ತಂದುಕೊಡಬಾರದೆ ಅನಿಸುತ್ತೆ :-)

ಅಂದಹಾಗೆ, ರೇಖಾ ಸಂಭಾವನೆ ಈಗ ಸಾಕಷ್ಟು ಹೆಚ್ಚಾಗಿದೆಯಂತೆ. ತುಂಟಾಟದಲ್ಲೂ ಅಷ್ಟೇ, ಛಾಯಾಸಿಂಗ್‌ಗಿಂತ ರೇಖಾ ಸಾಕಷ್ಟು ದುಬಾರಿ. ದೇಹ ಸಪೂರ, ತೆರಬೇಕಾದ ಸಂಭಾವನೆ ಭಾರ ! ತುಂಟಾಟ ಹಿಟ್‌ ಆಗಲಿ, ಠುಸ್‌ ಆಗಲಿ ರೇಖಾಗೆ ಚಿಂತಿಲ್ಲವಂತೆ. ಯಾಕೆಂದರೆ, ಈಕೆ ಎಲ್ಲಾ ಭಾಷೆಗಳ ಚಿತ್ರಗಳಿಗೂ ಲಗ್ಗೆಯಿಡುವ ಉತ್ಸಾಹದಲ್ಲಿದ್ದಾರೆ.

English summary
Bollywood is my dream : Chitra Rekha

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada