»   » ಹೆಣ್ಣುಮಗು ಬೇಕೇ? ರಮ್ಯ ಜೊತೆ ನಟಿಸಿ!

ಹೆಣ್ಣುಮಗು ಬೇಕೇ? ರಮ್ಯ ಜೊತೆ ನಟಿಸಿ!

Subscribe to Filmibeat Kannada

ರಮ್ಯಳನ್ನು ಈಗ ಶೂರ್ಪನಖಿ ಸಹೋದರಿ ಅಂದರೆ ತಪ್ಪಾಗಲಾರದು! ಅಂದಗಾತಿ ರಮ್ಯಳ ಮೂಗನ್ನು ಕಳೆದ ತಿಂಗಳಷ್ಟೇ ಕತ್ತರಿಸಿ, ಆಕೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ ವೈದ್ಯೆ ಡಾ.ಕಾಮಿನಿರಾವ್‌.

ರಮ್ಯಳ ಮೂಗು ಕೊಯುವ ಚರ್ಚೆಗೆ ಎಲ್ಲರೂ ಮೂಗು ತೂರಿಸಿ, ಮರೆತು ಹೋಗಿದ್ದಾರೆ. ಅದನ್ನು ಮತ್ತೆ ನೆನಪು ಮಾಡಿದ್ದು ಸ್ವತಃ ರಮ್ಯ ಅವರೇ ಎನ್ನುವುದು ಮತ್ತೊಂದು ವಿಶೇಷ.

ಸೋಮವಾರ ಸಂಜೆ ಕೆಎಸ್‌ಸಿಎ ಕ್ಲಬ್‌ನಲ್ಲಿ ‘ಗೌರಮ್ಮ’ ಚಿತ್ರದ ಸಂತೋಷ ಕೂಟದಲ್ಲಿ ಸುದ್ದಿಗಾರರೊಂದಿಗೆ ರಮ್ಯ ಮನಬಿಚ್ಚಿ ಮಾತನಾಡಿದರು. ನಗರದ ಸಾಗರ್‌ ಅಪೋಲೋ ಆಸ್ಪತ್ರೆಯಲ್ಲಿ ಮೂಗಿನ ಸರ್ಜರಿ ಮಾಡಿಸಿಕೊಂಡ ಬಗ್ಗೆ ಹೇಳಿದರು.

ನಾನು ನಟಿಸಿದ ‘ಅಭಿ’, ‘ಕಂಠಿ’ ಚಿತ್ರಗಳು ಶತದಿನ ಪೂರೈಸಿವೆ. ‘ಎಕ್ಸ್‌ಕ್ಯೂಸ್‌ ಮಿ’ ಸಿಲ್ವರ್‌ ಜ್ಯೂಬಿಲಿ ಕಂಡರೆ, ‘ಆದಿ’ ಮತ್ತು ‘ರಂಗ ಎಸ್‌ಎಸ್‌ಎಲ್‌ಸಿ’ 50ದಿನ ಕಂಡಿವೆ. ‘ಗೌರಮ್ಮ’ ಹಿಟ್‌ ಆಗಿದೆ, ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಅಮೃತಧಾರೆ’ಯೂ ಸಹ ಖಂಡಿತ ಹಿಟ್‌ ಆಗಲಿದೆ ಎಂದು ರಮ್ಯ ವಿಶ್ವಾಸ ವ್ಯಕ್ತಪಡಿಸಿದರು.

‘ಅಮೃತಧಾರೆ’ ಚಿತ್ರದ ಶೂಟಿಂಗ್‌ನಲ್ಲಿ ಕ್ಯಾಮೆರಾಮನ್‌ ಕೃಷ್ಣಕುಮಾರ್‌ ನನ್ನ ಬಗ್ಗೆ ಕಾಳಜಿ ವಹಿಸಲಿಲ್ಲ. 19,000 ಅಡಿ ಎತ್ತರದ ಹಿಮಪರ್ವತದ ಮೇಲೆ ಚಿತ್ರೀಕರಣ ನಡೆದಿತ್ತು. ಕೆಲವೇ ನಿಮಿಷಗಳಲ್ಲಿ ನನಗೆ ಉಸಿರಾಡಲು ಗಾಳಿ ಸಿಗದಿದ್ದಲ್ಲಿ ಅಂದು ಸತ್ತೇ ಹೋಗುತ್ತಿದ್ದೆ ಎನ್ನುವ ಕಹಿ ಅನುಭವವನ್ನು ಹಂಚಿಕೊಂಡರು.

ನನ್ನಿಂದ ಹೆಣ್ಣು ಮಗು : ‘ಅಭಿ’ ಚಿತ್ರದಲ್ಲಿ ಪುನೀತ್‌ ಜೊತೆ ನಟಿಸಿದೆ, ಆನಂತರ ಅವರಿಗೆ ಹೆಣ್ಣು ಮಗು ಹುಟ್ಟಿತು. ಸುದೀಪ್‌ ಜೊತೆ ರಂಗ ‘ಎಸ್‌ಎಸ್‌ಎಲ್‌ಸಿ’ಯಲ್ಲಿ ನಟಿಸಿದೆ, ಅವರಿಗೂ ಹೆಣ್ಣು ಮಗುವಾಯ್ತು. ಈಗ ಉಪೇಂದ್ರ ಜೊತೆ ‘ಗೌರಮ್ಮ’ ಚಿತ್ರದಲ್ಲಿ ನಟಿಸಿರುವೆ, ಚಿತ್ರದ ನಂತರ ಅವರಿಗೂ ಹೆಣ್ಣು ಮಗು ಜನಿಸಿದೆ ಎಂದು ರಮ್ಯ ತುಂಟತನದಿಂದ ಹೇಳಿದರು.

ರಮ್ಯ ಮಾತನ್ನು ಕೇಳಿದ ಹಿರಿಯ ಪತ್ರಕರ್ತರೊಬ್ಬರು, ಒಂದು ವೇಳೆ ದರ್ಶನ್‌ ಹೆಣ್ಣು ಮಗುವನ್ನು ಪಡೆಯಬೇಕೆಂದರೆ ತನ್ನ ಮುಂದಿನ ಚಿತ್ರಕ್ಕೆ ನಿನ್ನನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ತುಂಟರಾಗ ತೆಗೆದರು.

ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಮತ್ತವರ ಎರಡೂ ಮಕ್ಕಳು ಸಂತೋಷಕೂಟದಲ್ಲಿ ಎಲ್ಲರ ಗಮನಸೆಳೆದಿದ್ದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada