»   » ಕನಿಹಾ ಎಂಬ ತಮಿಳು ಸುಕುಮಾರಿ; ಈಗ ರಾಜಕುಮಾರಿ!

ಕನಿಹಾ ಎಂಬ ತಮಿಳು ಸುಕುಮಾರಿ; ಈಗ ರಾಜಕುಮಾರಿ!

Posted By:
Subscribe to Filmibeat Kannada


ಬಾ ಸನಿಹಾ ಎನ್ನುವಂತಿರುವ ಕನಿಹಾ ಎಂಬ ಬೆಡಗಿ ನಿಮಗೆ ಗೊತ್ತಿರಬಹುದು.ಈ ಹಿಂದೆ ದರ್ಶನ್ ಜೊತೆ ಅಣ್ಣಾವ್ರು, ಸುದೀಪ್ ಜೊತೆ ಸೈಚಿತ್ರದಲ್ಲಿ ನಟಿಸಿದ್ದ ಕನಿಹಾ, ಮತ್ತೆ ಸ್ಯಾಂಡಲ್ ವುಡ್ ಗೆ ರಾಜಕುಮಾರಿಯಾಗಿ ಮರಳಿದ್ದಾರೆ!

ಹೌದು.ಕೆ.ಮಂಜುನಿರ್ಮಾಣದ ರಾಜಕುಮಾರಿಚಿತ್ರದಲ್ಲಿ ಕನಿಹಾ ಅಭಿನಯಿಸುತ್ತಿದ್ದಾರೆ.ತಮಿಳಿನ ಚಾಕಲೇಟ್ಚಿತ್ರದ ಮೂಲಕ ಚಿತ್ರಪ್ರಪಂಚಕ್ಕೆ ಕಾಲಿಟ್ಟ ಕನಿಹಾ ಇಂಜಿನಿಯರಿಂಗ್ ಪದವಿ ಪಡೆದಿದ್ದರೂ, ಬಣ್ಣದ ಹಂಬಲ.

ಸ್ಯಾಂಡಲ್ ವುಡ್ ನಲ್ಲಿ ಗೆಲುವಿಗಾಗಿ ಸೈಕಲ್ ತುಳಿಯುತ್ತಿರುವ ರವಿಚಂದ್ರನ್ ಸಹೋದರ ಬಾಲಾಜಿ ಈ ಚಿತ್ರದ ನಾಯಕ.ಚಿತ್ರದಲ್ಲಿ ರವಿಚಂದ್ರನ್ ಗೆ ಅತಿಥಿ ಪಾತ್ರ. ಯಥಾಪ್ರಕಾರ ಇದು ಇನ್ನೊಂದು ರೀಮೇಕ್.ತಮಿಳಿನ ಪೂಂಗಾತ್ರೇಯವೇ ಕನ್ನಡದಲ್ಲಿ ರಾಜಕುಮಾರಿ!

ಮುಗ್ಗರಿಸಿದ ಭೂಪತಿ ಮತ್ತು ಜೂಟ್ ಚಿತ್ರದ ನಿರ್ದೇಶಕ ಎಸ್.ಗೋವಿಂದು ಅವರಿಗೆ ರಾಜಕುಮಾರಿಮೂರನೇ ಚಿತ್ರ. ಹೀಗಾಗಿ ಈ ಚಿತ್ರ ಅವರ ಪಾಲಿಗೆ ಜೊತೆಗೆ ಬಾಲಾಜಿ ಪಾಲಿಗೆ ನಿರ್ಣಾಯಕ. ಬುಧವಾರದಿಂದ ಚಿತ್ರೀಕರಣ ಭರದಿಂದ ಸಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada