»   » ರಾಣಿ ಮುಖರ್ಜಿ ಮತ್ತು ಆದಿತ್ಯರ ನಿಶ್ಚಿತಾರ್ಥ ನಿಜವೇ??

ರಾಣಿ ಮುಖರ್ಜಿ ಮತ್ತು ಆದಿತ್ಯರ ನಿಶ್ಚಿತಾರ್ಥ ನಿಜವೇ??

Subscribe to Filmibeat Kannada


ಮುಂಬಯಿ : ಬಾಲಿವುಡ್ ಬೆಡಗಿ ರಾಣಿ ಮುಖರ್ಜಿ ಮತ್ತು ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಅವರ ಪುತ್ರ ಆದಿತ್ಯ ಚೋಪ್ರಾರ ನಿಶ್ಚಿತಾರ್ಥ ಇತ್ತೀಚೆಗಷ್ಟೇ ನೆರವೇರಿದೆ ಎಂದು ಮಾಧ್ಯಮಗಳು ಬೊಬ್ಬೆ ಹಾಕುತ್ತಿವೆ.

ಮತ್ತೊಂದು ಕಡೆ ಇದೆಲ್ಲವೂ ಸುಳ್ಳು. ಕೆಲಸವಿಲ್ಲದ ಮಾಧ್ಯಮಗಳು ಇಂತಹ ಸುಳ್ಳು ಸುದ್ದಿಗಳ ಹಬ್ಬಿಸುತ್ತಿವೆ ಎಂದು ರಾಣಿ ಮುಖರ್ಜಿ ಅವರ ತಂದೆ ರಾಮ್ ಮುಖರ್ಜಿ ಕೂಗಿಕೂಗಿ ಹೇಳುತ್ತಿದ್ದಾರೆ. ನನ್ನ ಮಗಳಿಗೂ ಆದಿತ್ಯ ಚೋಪ್ರಾಗೂ ಸಂಬಂಧವಿಲ್ಲ. ಇಬ್ಬರ ನಡುವೆ ಪ್ರೀತಿಯೂ ಇಲ್ಲ, ಮಣ್ಣು ಇಲ್ಲ ಎಂಬುದು ಅವರ ವಿವರಣೆ.

ಗುಟ್ಟಾಗಿ ನಿಶ್ಚಿತಾರ್ಥ ನಡೆದಿದೆ. ಈ ಗುಟ್ಟಿಗೆ ಆದಿತ್ಯನ ಯಡವಟ್ಟೇ ಕಾರಣ. ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿ, ರಾಣಿ ಮುಖರ್ಜಿಯನ್ನು ಮದುವೆಯಾಗಲು ಅವರು ಈ ಹಿಂದೆಯೇ ನಿರ್ಧರಿಸಿದ್ದಾರೆ. ಅಲ್ಲದೇ ಎರಡು ವರ್ಷದಿಂದ ರಾಣಿ ಹಿಂದೆಯೇ ಸುತ್ತುತ್ತಿದ್ದಾರೆ. ಆದಿತ್ಯನ ತಂದೆ ಯಶ್ ಚೋಪ್ರಾಗೆ, ರಾಣಿಯನ್ನು ಸೊಸೆಯನ್ನಾಗಿ ಮಾಡಿಕೊಳ್ಳುವುದು ಇಷ್ಟವಿಲ್ಲ. ಹೀಗಾಗಿ ನಿಶ್ಚಿತಾರ್ಥ ಗುಪ್ತವಾಗಿ ನಡೆದಿದೆ ಎಂಬ ಅಂಶ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ನಿಶ್ಚಿತಾರ್ಥ ನಿಜವೋ? ಸುಳ್ಳೋ ರಾಣಿ ಅಥವಾ ಆದಿತ್ಯನೇ ಹೇಳಬೇಕು..

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada