»   » ಅಮಿತಾಭ್‌ ಮಗಳಾದಳು ಭಾವನಾ!

ಅಮಿತಾಭ್‌ ಮಗಳಾದಳು ಭಾವನಾ!

Posted By:
Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ ಕನ್ನಡ
ಕನ್ನಡ ಚಿತ್ರದಲ್ಲಿ ಅಮಿತಾಭ್‌ ನಟಿಸಿದರು ಎನ್ನುವ ಸುದ್ದಿ ಹಳೆಯದಾಗಿ ರದ್ದಿಯಾಗಿದೆ. ಈಗ ಅಮಿತಾಭ್‌ ಜೊತೆ ಕನ್ನಡದ ಬೆಡಗಿ ಭಾವನಾ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಿಂದ ಬಂದಿದೆ.

ಕೋಳಿ ಜಗಳದ ಸ್ಪೆಷಲಿಸ್ಟ್‌ ರಮ್ಯ, ಅಮಿತಾಭ್‌ ಜೊತೆ ನಟಿಸುವ ಅವಕಾಶವನ್ನು ನಾಗತೀ ಹಳ್ಳಿ ಚಂದ್ರಶೇಖರ್‌ ಚಿತ್ರದಲ್ಲಿ ದಕ್ಕಿಸಿಕೊಂಡಿದ್ದರು. ಕನ್ನಡ ಚಿತ್ರರಂಗದಿಂದ ನಾಪತ್ತೆಯಾಗಿದ್ದ ಭಾವನಾ, ಅಮಿತಾಭ್‌ ಅವರ ಮಗಳ ಪಾತ್ರವನ್ನು ‘ಫ್ಯಾಮಿಲಿ’ ಎಂಬ ಹಿಂದಿ ಚಿತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ‘ಘಾಯಲ್‌’ ಖ್ಯಾತಿಯ ರಾಜ್‌ಕುಮಾರ್‌ ಸಂತೋಷಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಭಾವನಾ ಈಗ ಮುಂಬಯಿ ವಾಸಿ. ಅವರೂ ಸಹಾ ಬೆಂಗಳೂರಿಗಿಂತಲೂ ಮುಂಬಯಿಯೇ ವಾಸಿ ಅನ್ನುತ್ತಿದ್ದಾರೆ. ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ವಲ್ಪ ಅವಕಾಶ ಸಿಗುತ್ತಿವೆ. ಕನ್ನಡದಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೆ ಮತ್ತು ಐಟಂ ಸಾಂಗ್‌ಗೆ ನನ್ನನ್ನು ಕರೆಯುತ್ತಾರೆ. ಸಂಭಾವನೆಯೂ ಕಡಿಮೆ. ಹೀಗಾಗಿ ಸದ್ಯಕ್ಕೆ ಕನ್ನಡಕ್ಕೆ ಟಾಟಾ ಎನ್ನುತ್ತಾರೆ ಭಾವನಾ.

ತೆಳ್ಳಗೆ ಬಳುಕುತ್ತಿದ್ದ ಭಾವನಾ ಈಗ ತುಸು ಊದಿಕೊಂಡಿದ್ದಾರೆ. ಅಗತ್ಯಕ್ಕಿಂತಲೂ ಹೆಚ್ಚಾಗಿಯೇ ಮಾಡ್‌ ಆಗಿದ್ದಾರೆ. ಹಿಂದಿ ಸಹ ಕಲಿತಿದ್ದಾರೆ. ಚಿತ್ರರಂಗದ ಎರಡನೇ ಕಲ್ಪನ ಎಂದೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾಗಿದ್ದ ಭಾವನಾ, ಬಿಚ್ಚಮ್ಮಳಾಗಿ ಧಾರಾಳತನ ತೋರಿಸಿದರೂ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಲ್ಲಲಾಗಲಿಲ್ಲ.

ಚಿತ್ರರಂಗ ಎನ್ನುವ ಮಾಯಾನಗರಿ, ಮಾಯಾಂಗನೆಯಂತೆ ಸಿಕ್ಕಿದ ಅವಕಾಶಗಳಲ್ಲಿಯೇ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ ಭಾವನಾಳನ್ನು ಮರೆತು ಬಿಟ್ಟಿತ್ತು. ಬರಗೂರು ರಾಮಚಂದ್ರಪ್ಪ ಅವರ ‘ಶಾಂತಿ’ ಚಿತ್ರ ಗಿನ್ನಿಸ್‌ ಪ್ರವೇಶಿಸಿದ ಖುಷಿಯನ್ನು ಹಂಚಿಕೊಳ್ಳಲು ಮುಂಬಯಿಯಿಂದ ಭಾವನಾ ದಿಢೀರ್‌ ಬೆಂಗಳೂರಿಗೆ ಬಂದಿದ್ದರು. ಮತ್ತೆ ಭಾವನಾ ತವರಿಗೆ ಯಾವಾಗ ಬರ್ತಾರೋ?

ಅಂದಹಾಗೆ ಮುಂಬಯಿ ಸೇರಿದ್ದ ಕನ್ನಡದ ಹುಡುಗಿ ರುಚಿತಾ ಪ್ರಸಾದ್‌ ಮತ್ತು ಡೈಸಿ ಬೋಪ್ಪಣ್ಣ ಅವರಿಗೆ ಹಿಂದಿ ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿವೆಯಂತೆ. ಎಲ್ಲೋ ಒಂದು ಕಡೆ ತಣ್ಣಗಿರಲಿ!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada