»   » ಉದ್ಯಮಿ ಜೊತೆ ಕರಿಷ್ಮಾ ಮದುವೆ

ಉದ್ಯಮಿ ಜೊತೆ ಕರಿಷ್ಮಾ ಮದುವೆ

Subscribe to Filmibeat Kannada

ಮುಂಬಯಿ: ಅಭಿಷೇಕ್‌ ಬಚ್ಚನ್‌ ಜೊತೆಗೆ ನಡೆದ ನಿಶ್ಚಿತಾರ್ಥವನ್ನು ಮುರಿದುಕೊಂಡ ಕರಿಷ್ಮಾ ಕಪೂರ್‌ ದೆಹಲಿ ಉದ್ಯಮಿಯಾಬ್ಬರನ್ನು ಮದುವೆಯಾಗಲಿದ್ದಾರೆ.

28ರ ಹರೆಯದ ಕರಿಷ್ಮಾ ಕಪೂರ್‌ ದೆಹಲಿಯ ಸೋನಾ ಸ್ಟೀರಿಂಗ್‌ ಕಂಪೆನಿಯ ಉದ್ಯಮಿ ಸಂಜಯ್‌ ಕಪೂರ್‌ ಅವರನ್ನು ಮದುವೆಯಾಗಲಿರುವ ವಿಷಯವನ್ನು ಕರಿಷ್ಮಾರ ತಂದೆ, ನಟ ರಣಧೀರ್‌ ಕಪೂರ್‌ ತಿಳಿಸಿದ್ದಾರೆ. ಸಂಜಯ್‌ ಹಾಗೂ ಕರಿಷ್ಮಾ ದೀರ್ಘ ಕಾಲದ ಸ್ನೇಹಿತರು. ಮದುವೆ ಹಾಗೂ ನಿಶ್ಚಿತಾರ್ಥದ ದಿನಾಂಕಗಳು ಇನ್ನೂ ಇತ್ಯರ್ಥವಾಗಿಲ್ಲ.

ಕರಿಷ್ಮಾ- ಅಭಿಷೇಕ್‌ ಮದುವೆಯ ಸುದ್ದಿ ಇಡೀ ಬಾಲಿವುಡ್‌ ಹಾಗೂ ಮುಂಬಯಿ ಮಹಾನಗರಿಯಲ್ಲೇ ಸುದ್ದಿ ಮಾಡಿದ್ದರೆ, ಮದುವೆ ಮುರಿದು ಬಿದ್ದ ವಿಷಯದಿಂದ ಮತ್ತೊಮ್ಮೆ ಬಾಲಿವುಡ್‌ ಹಾಗೂ ಮುಂಬಯಿ ಉದ್ಯಮ ನಗರಿ ಚಕಿತಗೊಂಡಿತ್ತು. ಎಲ್ಲರ ಕುತೂಹಲ ಕೇಂದ್ರವಾಗಿದ್ದ ಕರಿಷ್ಮಾ- ಅಭಿಷೇಕ್‌ ಇಬ್ಬರೂ ಮದುವೆ ಮುರಿದುಬಿದ್ದಿರುವ ಕಾರಣವನ್ನು ಬಹಿರಂಗ ಪಡಿಸದೇ, ದಿವ್ಯ ಮೌನ ಧರಿಸಿದ್ದರು.

ಇದೀಗ ಕರಿಷ್ಮಾ ಮದುವೆ ದೆಹಲಿ ಉದ್ಯಮಿ ಸಂಜಯ್‌ ಕಪೂರ್‌ ಜೊತೆಗೆ ನಿರ್ಣಯವಾಗುವುದರೊಂದಿಗೆ ಅಭಿಷೇಕ್‌ ಅಧ್ಯಾಯಕ್ಕೆ ಸಂಪೂರ್ಣ ತೆರೆ ಬಿದ್ದಂತಾಗಿದೆ. ಪ್ರಸ್ತುತ ಬೆಳ್ಳಿತೆರೆಯಿಂದ ಕಳಚಿಕೊಂಡು ಕಿರುತೆರೆಯತ್ತ ವಾಲಿರುವ ಕರಿಷ್ಮಾ ಕಪೂರ್‌ ‘ಕರಿಷ್ಮಾ’ ಎಂಬ ಮೆಗಾ ಟೆಲಿ ಸೀರಿಯಲ್‌ನ್ನು ನಿರ್ವಹಿಸಲಿದ್ದಾರೆ.

ರಾಜಾ ಬಾಬು, ಕೂಲಿ ನಂಬರ್‌ 1, ರಾಜಾ ಹಿಂದೂಸ್ತಾನಿ, ಅನಾರಿ, ಖುದ್ದಾರ್‌, ದಿಲ್‌ ತೋ ಪಾಗಲ್‌ ಹೈ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಹಿಟ್‌ಚಿತ್ರಗಳನ್ನು ಕೊಟ್ಟ ಕರಿಷ್ಮಾ , ರಾಜಾ ಹಿಂದೂಸ್ತಾನಿ ಹಾಗೂ ಪಿಝಾ ಚಿತ್ರಕ್ಕಾಗಿ ಫಿಲ್ಮಫೇರ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಝುಬೇದಾ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದ್ದರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada