»   » ಮಕ್ಕಳಿಗಾಗಿ ರಮೇಶ್‌ ನಿರ್ದೇಶಕರಾದರು !

ಮಕ್ಕಳಿಗಾಗಿ ರಮೇಶ್‌ ನಿರ್ದೇಶಕರಾದರು !

Posted By: Super
Subscribe to Filmibeat Kannada
Actor Ramesh Arvind
ಗಾಂಧಿನಗರದಲ್ಲೊಂದು ಚಿತ್ರ ನಿರ್ದೇಶಿಸುವ ರಮೇಶ್‌ ಆಸೆ ಇನ್ನೂ ಈಡೇರಿಲ್ಲ . ಆದರೆ, ನಿರ್ದೇಶನದ ಆಸೆ ಮಾತ್ರ ಸಿ.ಎಮ್‌.ಸಿ.ಎ. ಮೂಲಕ ಒಂದು ಈಡೇರಿದೆ. ಸಿನಿಡೆಸ್ಕ್‌, ದಟ್ಸ್‌ಕನ್ನಡ'ಮಕ್ಕಳೇ ಬೆಂಗಳೂರನ್ನು ಸ್ವಚ್ಛವಾಗಿಡಿ!'ನಾಳಿನ ಪ್ರಜೆಗಳಾದ ಇಂದಿನ ಮಕ್ಕಳಿಗೆ ನಾಗರಿಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಸಿನಿಮಾ ನಟ ರಮೇಶ್‌ ಅರವಿಂದ್‌ ನೀಡಿರುವ ಕರೆಯಿದು. ರಮೇಶ್‌ರ ಈ ಪ್ರಯತ್ನಕ್ಕೆ ಕೈಜೋಡಿಸಿರುವುದು ಭಾರತೀಯ ಕ್ರಿಕೆಟ್‌ ತಂಡದ ಗೋಡೆ- ರಾಹುಲ್‌ ದ್ರಾವಿಡ್‌!

ಮಕ್ಕಳಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳು-ಕರ್ತವ್ಯಗಳು ಹಾಗೂ ಸಕ್ರಿಯ ಪೌರತ್ವದ ಅರಿವನ್ನು ಮೂಡಿಸುವ ಉದ್ದೇಶದಿಂದ ಸಿ.ಎಮ್‌.ಸಿ.ಎ(ಚಿಲ್ಡನ್ಸ್‌ ಮೂಮೆಂಟ್‌ ಫಾರ್‌ ಸಿವಿಕ್‌ ಅವೇರನೆಸ್‌) ನಿರ್ಮಿಸಿರುವ 'ಹೌದುದು ಸಕ್ರಿಯ ನಾಗರಿಕನಾಗುವುದೇ ನನ್ನ ಇಚ್ಛೆ' (Of course I want to be an active citizen) ಎಂಬ ಮಕ್ಕಳ ಕಿರುಚಿತ್ರದ ಪ್ರದರ್ಶನ ಶುಕ್ರವಾರ (ಆ.20) ಬೆಂಗಳೂರಿನ ಕಬ್ಬನ್‌ ಉದ್ಯಾನದಲ್ಲಿನ ಬಾಲಭವನದಲ್ಲಿ ನಡೆಯಿತು. 20 ನಿಮಿಷದ ಈ ಕಿರುಚಿತ್ರದ ಪರಿಕಲ್ಪನೆ, ಕಥೆ ಹಾಗೂ ನಿರ್ದೇಶನ ರಮೇಶ್‌ ಅವರದು. ನಿರ್ದೇಶಕನಾಗಬೇಕು ಎನ್ನುವ ರಮೇಶ್‌ರ ಆಸೆ ಈ ಕಿರುಚಿತ್ರದ ಮೂಲಕ ಈಡೇರಿದೆ !

ಈ ಕಿರುಚಿತ್ರ ಪ್ರಸಂಗದಲ್ಲಿ ಕ್ರಿಕೆಟಿಗ ದ್ರಾವಿಡ್‌ ಪಾತ್ರವೇನು ಎಂದಿರಾ ? ಆತ ನಟ. ಹೌದು, ದ್ರಾವಿಡ್‌ ಈ ಕಿರುಚಿತ್ರದ ಕೇಂದ್ರಪಾತ್ರದಲ್ಲಿ ನಟಿಸಿದ್ದಾರೆ. ಈ ಕಿರುಚಿತ್ರದ ಮುಖ್ಯ ಉದ್ದೇಶ ಜಗತ್ತಿನಾದ್ಯಂತ ಅನಿಯಂತ್ರಿತ ಅಭ್ಯಾಸದಿಂದ ಕೂಡಿದ ಮತ್ತು ಅಮಾನವೀಯ ಮುಖವಾಡ ಹೊತ್ತ ನಾಗರೀಕರಣದ ಸವಾಲುಗಳನ್ನು ಚಿಣ್ಣರಿಗೆ ಮುಟ್ಟಿಸುವುದು. ಮೂಲಭೂತ ಸೇವಾ ಸೌಕರ್ಯಗಳ ಪೂರೈಕೆಯಲ್ಲಾಗಿರುವ ತೀವ್ರ ಕೊರತೆಯನ್ನು ಮಕ್ಕಳಿಗೆ ತಿಳಿಸುವುದೂ ಈ ಕಿರುಚಿತ್ರದ ಉದ್ದೇಶವಾಗಿದೆ.

ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ನಟ ರಮೇಶ ಅರವಿಂದ್‌, ಪಿ.ಎ.ಸಿ.ಅಧ್ಯಕ್ಷ ಪದ್ಮಶ್ರೀ ಸ್ಯಾಮುಯೆಲ್‌ ಪಾಲ್‌ ಹಾಜರಿದ್ದರು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಿರುಚಿತ್ರ ವೀಕ್ಷಿಸಿದರು. ರಾಹುಲ್‌ದ್ರಾವಿಡ್‌ ಹಾಲೆಂಡಿನಲ್ಲಿ ಕ್ರಿಕೆಟ್‌ ಆಡುತ್ತಿರುವುದರಿಂದ ಅವರು ಕಾರ್ಯಕ್ರಮಕ್ಕೆ ಆ್ಯಬ್ಸೆಂಟ್‌.

English summary
Actor Ramesh Arvind created a film, Of course I want to be an active citizen, along with Rahul Dravid to urge children to become socially responsible.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada