»   » ಮಾತಾಡ್ ಮಾತಾಡ್ ಮಲ್ಲಿಗೆಬಗ್ಗೆ ಎರಡು ಮಾತು!

ಮಾತಾಡ್ ಮಾತಾಡ್ ಮಲ್ಲಿಗೆಬಗ್ಗೆ ಎರಡು ಮಾತು!

Posted By: Super
Subscribe to Filmibeat Kannada

ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಎರಡು ಚಿತ್ರಗಳು ಪ್ರೇಕ್ಷಕರೆದುರು ನಿಲ್ಲಲಿವೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಣ ಮಾಡಲಾಗಿರುವ ಎರಡು ದೊಡ್ಡ ಚಿತ್ರಗಳು, ಆ.24ರಂದು ಬಿಡುಗಡೆಗೆ ಸಿದ್ಧತೆ ನಡೆಸಿವೆ.

ನಟ ವಿಷ್ಣುವರ್ಧನ್, ಸುಹಾಸಿನಿ ಅಭಿನಯದ ಮಾತಾಡ್ ಮಾತಾಡು ಮಲ್ಲಿಗೆಮತ್ತು ಶಿವರಾಜ್ ಕುಮಾರ್, ಗೌರಿ ಅಭಿನಯದ ಗಂಡನ ಮನೆಒಂದೇ ದಿನ ತೆರೆಗೆ ಬರುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಕಿಡಿಕಾರುವ ಮಾಮಾಮಚಿತ್ರದ ಬಗ್ಗೆ ನಿರ್ದೇಶಕ ನಾಗತಿಹಳ್ಳಿಗೆ ಸಕತ್ತು ನಿರೀಕ್ಷೆಗಳಿವೆ. ಬಹುರಾಷ್ಟ್ರೀಯ ಕಂಪನಿಗಳ ಬೆದರಿಕೆಗೆ ಜಗ್ಗದೇ, ನಾಗತಿಹಳ್ಳಿ ಚಿತ್ರವನ್ನು ಉತ್ಸಾಹದಿಂದ ಪೂರ್ಣಗೊಳಿಸಿದ್ದಾರೆ. ಜಾಗತೀಕರಣದ ಅಡ್ಡ ಪರಿಣಾಮಗಳು ಚಿತ್ರದಲ್ಲಿ ಪ್ರತಿಬಿಂಬಿಸಲಿವೆ. ರೈತನ ಪಾತ್ರದಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದಾರೆ.

ಕೆ.ಮಂಜು ಸುಮಾರು 4ಕೋಟಿ ಸುರಿದು ಮಾಮಾಮನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಪ್ರೀಮಿಯರ್ ಶೋಗಳು ಬೆಂಗಳೂರಿನಲ್ಲಿಯೇ ನಡೆಯುತ್ತವೆ. ಆದರೆ ಈ ಚಿತ್ರದ ಪ್ರೀಮಿಯರ್ ಶೋ(ಆ.22ರ ಸಂಜೆ 6ಕ್ಕೆ) ಬೆಳಗಾವಿಯಲ್ಲಿ ನಡೆಯಲಿದೆ. ಚಿತ್ರರಂಗದ ಇತಿಹಾಸದಲ್ಲಿ ಇದು ಮೊದಲ ಪ್ರಯತ್ನ. ಈ ಗಡಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿವೇಶನ ನಡೆಸಿ, ಅಲ್ಲಿನ ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬಿದ್ದರು. ಈಗ ಕನ್ನಡ ಚಿತ್ರವೊಂದರ ಪ್ರೀಮಿಯರ್ ಶೋ ಸಂಭ್ರಮ.

ಇನ್ನು ಹೆಸರಾಂತ ಸಂಗೀತ ನಿರ್ದೇಶಕ ಮಣಿರತ್ನಂ ಮತ್ತು ಮೇಧಾ ಪಾಟ್ಕರ್ ಗಾಗಿ ಬೆಂಗಳೂರಿನಲ್ಲಿ ಮಾಮಾಮಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ. ಮನೋಮೂರ್ತಿ ಸಂಗೀತ, ಕೃಷ್ಣ ಕುಮಾರ್ ಛಾಯಾಗ್ರಹಣವನ್ನು ಚಿತ್ರ ಹೊಂದಿದೆ.

ವಿಷ್ಣುವರ್ಧನ್, ಸುಹಾಸಿನಿ, ಸುದೀಪ್, ರಂಗಾಯಣ ರಘು, ತಾರಾ, ರಶ್ಮೀ ಕುಲಕರ್ಣಿ,ಸ್ಮಿತಾ, ತೇಜಸ್ವಿನಿ ಮುಖ್ಯಪಾತ್ರದಲ್ಲಿದ್ದಾರೆ.

English summary
Two big stars films Mathad Mathadu Malligeand Gandana Mane are releasing on 24th of this month all over Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada