»   » ಸಂಜಯ್ ಬಡಗಿಯಾಗಿ ಜೈಲಿನಲ್ಲಿ ದುಡಿದ ಹಣವೆಷ್ಟು ಗೊತ್ತೆ?

ಸಂಜಯ್ ಬಡಗಿಯಾಗಿ ಜೈಲಿನಲ್ಲಿ ದುಡಿದ ಹಣವೆಷ್ಟು ಗೊತ್ತೆ?

Subscribe to Filmibeat Kannada


ಪುಣೆ, ಆಗಸ್ಟ್ 21 : ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಜಾಮೀನು ಸಿಕ್ಕಿದೆ. ಕಳೆದ 16ದಿನಗಳ ಅವರ ಜೈಲು ವಾಸ ಹೇಗಿತ್ತು ಎಂಬ ಕುತೂಹಲ ಸಹಜವಾದದ್ದೇ.

ಪುಣೆಯ ಯರವಾಡ ಜೈಲಿನಲ್ಲಿ ಎಲ್ಲಾ ಕೈದಿಗಳಂತೆಯೇ ಸಂಜಯ್ ಸಹಾ ಇದ್ದರು. ಬಡಗಿ ಕೆಲಸ ಮಾಡಿ ಅವರು ಈವರೆಗೆ 204 ರೂಪಾಯಿಯನ್ನು ಸಂಪಾದಿಸಿದ್ದಾರೆ. ಸಂಜಯ್ ಮಾಡಿದ ಕೆಲಸಕ್ಕೆ ದಿನಕ್ಕೆ ರೂ.12.74 ನಿಗದಿ ಮಾಡಲಾಗಿತ್ತು.

ಮಾನವ ಹಕ್ಕುಗಳ ಸಂಘಟನೆ ಕಾರ್ಯಕರ್ತ ಮತ್ತು ವಕೀಲ ಅಸೀಮ್ ಫರೋಡ್ ಸಂಜಯ್ ಅವರನ್ನು ಸೋಮವಾರ ಸಂಜೆ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ನಾನು ಬಿಡುಗಡೆಯಾಗುತ್ತೇನೆ ಎಂಬ ವಿಶ್ವಾಸ ನಿಮಗಿತ್ತೆ?ಎಂದು ಸಂಜಯ್ ಮುಗ್ಧತೆಯಿಂದ ಪ್ರಶ್ನಿಸಿದ್ದಾರೆ. ಜೈಲಿನಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕು ಎಂದು ಸಂಜಯ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನ ವಿಶೇಷ ಟಾಡಾ ನ್ಯಾಯಾಲಯ ಶಿಕ್ಷೆ ನೀಡಿರುವ ದಾಖಲೆಗಳು, ಹೊರಬರುವ ತನಕ ಸಂಜಯ್ ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡು, ಮಂಗಳವಾರ ರಾತ್ರಿ ಸಂಜಯ್ ಬಂಧ ಮುಕ್ತರಾಗುವ ಸಾಧ್ಯತೆಗಳಿವೆ.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada