»   » ಬಲ್ಲಾಳರ ‘ಹೆಜೆ’್ಜ ಗೆ ಹ್ಯಾಟ್ರಿಕ್‌ ಗೆಜ್ಜೆ

ಬಲ್ಲಾಳರ ‘ಹೆಜೆ’್ಜ ಗೆ ಹ್ಯಾಟ್ರಿಕ್‌ ಗೆಜ್ಜೆ

Posted By: Staff
Subscribe to Filmibeat Kannada

ಸೂರ್ಯವಂಶ, ಗಲಾಟೆ ಅಳಿಯಂದ್ರು, ಚಂದ್ರಚಕೋರಿ ಎನ್ನುವ ಜನಪ್ರಿಯ ಚಿತ್ರಗಳ ನಿರ್ಮಾಪಕ ಎಚ್‌.ಡಿ.ಕುಮಾ ರ ಸ್ವಾಮಿ ಹಾಗೂ ನಿರ್ದೇಶಕ ಎಸ್‌. ನಾರಾಯಣ್‌ ಚಿತ್ರರಂಗದಲ್ಲಿ ಹ್ಯಾಟ್ರಿಕ್‌ ಜೋಡಿ. ಹ್ಯಾಟ್ರಿಕ್‌ ಜೋಡಿ ಮತ್ತೊಂದು ಯಶಸ್ಸಿಗಾಗಿ ಮತ್ತೊಮ್ಮೆ ಕೈಜೋಡಿಸಿದೆ.

ಇಬ್ಬರೂ ಈಗ ಕೊಂಚ ತಮ್ಮ ಹಾದಿಯನ್ನು ಬದಲಾಯಿಸಿದ್ದಾರೆ. ಹೆಸರಾಂತ ಕಾದಂಬರಿಕಾರ ವ್ಯಾಸರಾಯ ಬಲ್ಲಾಳರ 'ಹೆಜೆ"್ಜ ಕಾದಂಬರಿಯನ್ನು ಅದೇ ಹೆಸರಿನಲ್ಲಿ ತೆರೆಗೆ ತರುತ್ತಿದ್ದಾರೆ. ಉತ್ತರಾಯಣ ಧಾರಾವಾಹಿಯನ್ನು ಕಿರುತೆರೆಯಲ್ಲಿ ಕಂಡು ಪುಳಕಗೊಂಡಿರುವ ವೀಕ್ಷರಿಗೆ, ಈಗ ಹಿರಿತೆರೆಯಲ್ಲಿ ವ್ಯಾಸರಾಯ ಬಲ್ಲಾಳರ ಮತ್ತೊಂದು ಕಾದಂಬರಿಯ ಕಾಣುವ ಅವಕಾಶ ದೊರಕಲಿದೆ.

ಹೆಜ್ಜೆ ಕಥಾವಸ್ತು ಅಂತಿಂಥದ್ದಲ್ಲ. ಸ್ವಾತಂತ್ರ್ಯ ಪೂರ್ವದ ಕಥಾವಸ್ತು. ಆಗಿನ ಕಾಲ, ಉಡುಗೆ, ಮಾತು ಎಲ್ಲವೂ ಚಾಚೂ ತಪ್ಪದಂತಿರಬೇಕು. ಮೂಲ ಕಾದಂಬರಿಗೆ ಲೋಪವಾಗದಂತೆ ಚಿತ್ರ ತಯಾರಿಸಲು ಕುಮಾರ್‌-ನಾರಾಯಣ್‌ ಜೋಡಿ ಸಿದ್ಧತೆ ನಡೆಸುತ್ತಿದೆ.

(ಇನ್ಫೋ ವಾರ್ತೆ)

English summary
Noted Kannanda writer Vyasaraya Ballal's novel 'Hejje' is brought to Kannada silver screen shortly.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada