»   » ವಿಷ್ಣು - ಅನಿರುದ್ಧ್‌ ಚಿತ್ರದಲ್ಲಿ ಮೀರಾ!

ವಿಷ್ಣು - ಅನಿರುದ್ಧ್‌ ಚಿತ್ರದಲ್ಲಿ ಮೀರಾ!

Subscribe to Filmibeat Kannada

ಮತ್ತೆ ಕನ್ನಡ ಚಿತ್ರರಂಗದತ್ತ ಮುಖಮಾಡಿದ್ದಾಳೆ ಮೀರಾ. ಕೇರಳದ ಈ ಚೆಂದುಳ್ಳಿ ಚೆಲುವೆ, ಚಿತ್ರನಟಿ ಮೀರಾ ಜಾಸ್ಮಿನ್‌ ಅವರನ್ನು ಸ್ಯಾಂಡಲ್‌ವುಡ್‌ಗೆ ಕರೆತರುವಲ್ಲಿ ಕೆ.ಮಂಜು ಯಶಸ್ಸು ಪಡೆದಿದ್ದಾರೆ!

ವಿಷ್ಣುವರ್ಧನ್‌ ಪಾಳಯದಲ್ಲಿ ಗುರ್ತಿಸಿಕೊಂಡಿರುವ ಕೆ.ಮಂಜು, ಅವರ ಅಳಿಯ ಅನಿರುದ್ಧನನ್ನು ಹೀರೋ ಮಾಡುವ ಸಾಹಸಕ್ಕೆ ಮುಂದಾಗಿದ್ದಾರೆ. ಇನ್ನೂ ಹೆಸರಿಡದ ಈ ಕನ್ನಡ ಚಿತ್ರದಲ್ಲಿ ಮೀರಾ ವಿಷ್ಣುವರ್ಧನ್‌ ಅವರ ತಂಗಿಯಾಗಿ, ವಿಷ್ಣು ಅಳಿಯ ಅನಿರುದ್ಧ ಅವರ ಜೋಡಿಯಾಗಿ ಅಭಿನಯಿಸಲಿದ್ದಾರೆ.

ಪವರ್‌ ಸ್ಟಾರ್‌ ಪುನೀತ್‌ರಾಜ್‌ ಕುಮಾರ್‌ ಅವರ ‘ಮೌರ್ಯ’ ಚಿತ್ರದ ಮೂಲಕ ಮೋಹಕ ನಗೆಯ ಮೀರಾ, ಪ್ರೇಕ್ಷಕರ ಮನಗೆದ್ದಿದ್ದರು. ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಗೆದ್ದಿತ್ತು. ಅವಕಾಶಗಳು ಬಾಗಿಲಿಗೆ ಹೋದರೂ, ಅವರು ಸ್ಯಾಂಡಲ್‌ವುಡ್‌ಗೆ ಟಾಟಾ ಹೇಳಿದ್ದರು. ಈಗ ಮತ್ತೊಮ್ಮೆ ಮೀರಾ ಮಹಾತ್ಮೆ ಶುರು ...

Post your views

ಮೀರಾ ಜಾಸ್ಮಿನ್‌ ಚಿತ್ರಪಟ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada