»   » ನೀವು ತಪ್ಪದೆ ಬನ್ನಿ, ಆಯ್ತಾ ? : ರವಿ ಬೆಳಗೆರೆ ಕರೆ

ನೀವು ತಪ್ಪದೆ ಬನ್ನಿ, ಆಯ್ತಾ ? : ರವಿ ಬೆಳಗೆರೆ ಕರೆ

Posted By:
Subscribe to Filmibeat Kannada


ಪ್ರಿಯರೇ,

ಅವತ್ತು ಇಡೀ ಪ್ರೆಸ್ ಕ್ಲಬ್ ಆವರಣಕ್ಕೆ ಷಾಮಿಯಾನಾ ಹಾಕಿಸಿ ನಿಮಗೋಸ್ಕರ ಕಾಯುತ್ತಿರುತ್ತೇನೆ. ಬೆಳಗ್ಗೆ ಒಂಬತ್ತಕ್ಕೆ ಬನ್ನಿ. ವಿಶೇಷ ವಿನಂತಿ ಅಂದರೆ ಕ್ಲಬ್ ಆವರಣದಲ್ಲಿ ಚೆಂದದ ಗಿಡ-ಸಸಿಗಳಿವೆ. ಮೃದುವಾದ ಹುಲ್ಲುಹಾಸು ಇದೆ. ಕಾಲಿಡುವ ಮುನ್ನ, ಕೈ ಬೀಸುವ ಮುನ್ನ ಅವುಗಳೆಡೆಗೆ ಪ್ರೀತಿ ತುಂಬಿದ ಎಚ್ಚರವಿರಲಿ.

ಒಂದಷ್ಟು ಸಿನಿಮಾ ಮಂದಿ ಇರುತ್ತಾರೆ. ಹಾಗಂತ ತುಂಬ ಎಕ್ಸೈಟ್ ಆಗೋರೇನಲ್ಲ ನೀವು : ನಂಗೊತ್ತು. ಅವರ ಪಾಡಿಗೆ ಅವರನ್ನು ಬಿಡಿ. ಎಂದಿನಂತೆ ಒಂದು ಪುಸ್ತಕ ಬಿಡುಗಡೆ ಸಮಾರಂಭ, ಒಂದು ಸಿ.ಡಿ.ಬಿಡುಗಡೆ ಸಮಾರಂಭ ಸಂತೋಷದಿಂದ ನಡೆದು ಹೋಗುವಂತೆ 'ಮುಖ್ಯಮಂತ್ರಿ ಐ ಲವ್ ಯೂ'ಚಿತ್ರದ ಮೂಹೂರ್ತವೂ ನಡೆಯಲಿ. ಬಿಡುವು ಸಿಕ್ಕರೆ ಅಲ್ಲೇ ಎದುರಿಗಿರುವ ಕಬ್ಬನ್ ಪಾರ್ಕಿನಲ್ಲಿ ಹತ್ತು ನಿಮಿಷ ಹರಟೋಣ. ನಿಮ್ಮನ್ನೆಲ್ಲ ನೋಡಿ ಯಾವ ಕಾಲವಾಯಿತು! ತಪ್ಪದೆ ಬನ್ನಿ; ಆಯ್ತಾ?

ದಿನಾಂಕ : 22ನವೆಂಬರ್ 2007,
ಬೆಳಗ್ಗೆ 9ಕ್ಕೆ
ಸ್ಥಳ : ಬೆಂಗಳೂರು ಪ್ರೆಸ್ ಕ್ಲಬ್, ವಿಧಾನಸೌಧದ ಎದುರಿಗೆ.

ನಿಮ್ಮ
ರವಿ ಬೆಳಗೆರೆ

'ಮುಖ್ಯಮಂತ್ರಿ ಐ ಲವ್ ಯೂ'ಚಿತ್ರದ ಮೂಹೂರ್ತದಗ್ಯಾಲರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada