For Quick Alerts
  ALLOW NOTIFICATIONS  
  For Daily Alerts

  ದ.ಭಾ.ಚ.ವಾ.ಮಂಡಳಿ ಅಧ್ಯಕ್ಷರಾಗಿ ಕೆಸಿಎನ್‌ ಮರು ಆಯ್ಕೆ

  By Staff
  |

  ಬೆಂಗಳೂರು : ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಕರ್ನಾಟಕದ ಹಿರಿಯ ಚಿತ್ರೋದ್ಯಮಿ ಕೆ.ಸಿ.ಎನ್‌.ಚಂದ್ರಶೇಖರ್‌ ಮರು ಆಯ್ಕೆಯಾಗಿದ್ದಾರೆ.

  ಚೆನ್ನೈನಲ್ಲಿ ನಡೆದ ಮಂಡಳಿಯ 66ನೇ ವಾರ್ಷಿಕ ಸಭೆಯಲ್ಲಿ ಚಂದ್ರಶೇಖರ್‌ ಸೇರಿದಂತೆ ಇತರೆ ಪದಾಧಿಕಾರಿಗಳನ್ನು 2005ರ ಸಾಲಿಗೆ ಆಯ್ಕೆ ಮಾಡಲಾಗಿದೆ.

  ಪದಾಧಿಕಾರಿಗಳ ವಿವರ :
  ಉಪಾಧ್ಯಕ್ಷರಾಗಿ ಡಿ. ಸುರೇಶ್‌ ಬಾಬು(ಸ್ಟುಡಿಯೋ ವಲಯ), ಎ.ಕೋದಂಡರಾಮಯ್ಯ(ನಿರ್ಮಾಪಕರ ವಲಯ), ಕೆ.ಎಸ್‌.ನಾಗರಾಜನ್‌(ವಿತರಕರ ವಲಯ), ಎಂ.ಸುಬ್ರಹ್ಮಣ್ಯಂ(ಪ್ರದರ್ಶಕ ವಲಯ) ಆಯ್ಕೆಗೊಂಡಿದ್ದಾರೆ.

  ಗೌರವ ಕಾರ್ಯದರ್ಶಿಗಳಾಗಿ ನಾಗೇಶ್ವರರಾವ್‌(ಸ್ಟುಡಿಯೋ/ಪ್ರದರ್ಶಕ ವಲಯ), ಕೆ.ವೇಣು ಗೋಪಾಲ್‌ (ವಿತರಕ/ಪ್ರದರ್ಶಕ ವಲಯ), ಕೋಶಾಧ್ಯಕ್ಷರಾಗಿ ರವಿ ಕೋಟ್ಟಾರಕರ ಆಯ್ಕೆಗೊಂಡಿದ್ದಾರೆ.

  ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೆ.ಜಿ.ಎನ್‌.ಚಂದ್ರಶೇಖರ್‌, ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
  (ಇನ್ಫೋ ವಾರ್ತೆ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X