»   » ನಿರ್ಮಾಪಕರು ‘ಕೇರಾಫ್‌ ಫುಟ್‌ ಪಾತ್‌’ ಆಗದಿರಲಿ!

ನಿರ್ಮಾಪಕರು ‘ಕೇರಾಫ್‌ ಫುಟ್‌ ಪಾತ್‌’ ಆಗದಿರಲಿ!

Subscribe to Filmibeat Kannada


ಈ ಶುಕ್ರವಾರ 4 ಸಿನಿಮಾಗಳ ಬಿಡುಗಡೆ! ಯಾಕೀ ಸರಸರದ ಅವಸರ? ಏನೀ ಆತುರ?

ಯಾಕೋ ಕನ್ನಡ ಚಿತ್ರರಂಗದಲ್ಲಿನ ಬಿಕ್ಕಟ್ಟು-ಇಕ್ಕಟ್ಟುಗಳು ಕರಗುತ್ತಲೇ ಇಲ್ಲ. ಈ ಮಧ್ಯೆ ನಟ ಅಂಬರೀಷ್‌ ‘ಕೇರಾಫ್‌ ಫುಟ್‌ಪಾತ್‌’ ಚಿತ್ರದ ಸಮಸ್ಯೆಯನ್ನು ಬಿಡಿಸಿರುವುದು ಸಮಾಧಾನದ ಸಂಗತಿ. ಹೀಗಾಗಿ ಚಿತ್ರ ನ.24ರಂದು ರಾಜ್ಯದೆಲ್ಲೆಡೆ ತೆರೆಕಾಣಲಿದೆ.

ನ.24ರಂದು ‘ಕೇರಾಫ್‌ ಫುಟ್‌ಪಾತ್‌’ ಬಿಡುಗಡೆಯಾಗುತ್ತಿರುವ ದಿನವೇ, ಸ್ಟುಡೆಂಟ್‌, ಕನ್ನಡದ ಕಂದ, ತನನಂ ತನನಂ ಚಿತ್ರಗಳು ತೆರೆಕಾಣುತ್ತಿವೆ. ಒಂದೇ ದಿನ ನಾಲ್ಕು ಚಿತ್ರಗಳು ಬಿಡುಗಡೆಗೊಳ್ಳುವ ಅನಾರೋಗ್ಯಕರ ಪರಿಸ್ಥಿತಿ ನಿರ್ಮಾಣವಾಗಿದೆ. ವಾರಕ್ಕೆ ಒಂದು ಅಥವಾ ಎರಡು ಚಿತ್ರಗಳು ಈವರೆಗೆ ತೆರೆಕಾಣುತ್ತಿದ್ದವು. ಈ ಸಂಪ್ರದಾಯಕ್ಕೆ ಭಂಗ ಬಂದಿದ್ದು, ನಿರ್ಮಾಪಕರ ಸ್ಥಿತಿ ಕಷ್ಟ ಕಷ್ಟ ಕಷ್ಟ.

‘ನಮ್ಮ ಚಿತ್ರಕ್ಕೆ ಚಿತ್ರಮಂದಿರ ನೀಡದೇ, ಚಿತ್ರಮಂದಿರದ ಮಾಲೀಕರು ಅನ್ಯಾಯ ಮಾಡುತ್ತಿದ್ದಾರೆ. ಚಿತ್ರದ ರೀಲುಗಳನ್ನು ಡಾ.ರಾಜ್‌ಕುಮಾರ್‌ ಸಮಾಧಿ ಬಳಿ ಸುಡುತ್ತೇನೆ. ಇನ್ನೆಂದೂ ಕನ್ನಡ ಚಿತ್ರಗಳನ್ನು ನಾನು ನಿರ್ದೇಶಿಸುವುದಿಲ್ಲ.. ಜೊತೆಗೆ ನಟಿಸುವುದೂ ಇಲ್ಲ ’ ಎಂದು ಗಿನ್ನಿಸ್‌ ದಾಖಲೆಯ ಪುಟಾಣಿ ನಿರ್ದೇಶಕ ಮಾ. ಕಿಶನ್‌ ಇತ್ತೀಚೆಗೆ ಹೇಳಿದ್ದರು.

ಅಂಬರೀಷ್‌ ಮಧ್ಯಪ್ರವೇಶದಿಂದ ಸಮಸ್ಯೆ ಇತ್ಯರ್ಥಗೊಂಡಿದ್ದು, ಚಿತ್ರಮಂದಿರಗಳನ್ನು ನೀಡಲು, ಚಿತ್ರಿಮಂದಿರದ ಮಾಲೀಕರು ಸಮ್ಮತಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada