»   » ಹೇಮಾಮಾಲಿನಿ, ಜ್ಯೂಹಿ ಕೈಗೆ ಬಿಜೆಪಿ ಝಂಡಾ !

ಹೇಮಾಮಾಲಿನಿ, ಜ್ಯೂಹಿ ಕೈಗೆ ಬಿಜೆಪಿ ಝಂಡಾ !

Posted By: Staff
Subscribe to Filmibeat Kannada

ನವ ದೆಹಲಿ : ಗುಜರಾತಿನಲ್ಲಿ ನರೇಂದ್ರ ಮೋದಿ ಹಣೆಬರಹ ತಿದ್ದಿ ತೀಡಲು ಮಾಜಿ ಡ್ರೀಮ್‌ಗರ್ಲ್‌ ಹೇಮಾಮಾಲಿನಿ ಮತ್ತು ಸದ್ಯಕ್ಕೆ ತಣ್ಣಗಾಗಿರುವ ಹಾಲಿ ಬಾಲಿವುಡ್‌ ನಟಿ ಜ್ಯೂಹಿ ಚಾವ್ಲಾ ಅವರ ಕೈಗೆ ಬಿಜೆಪಿ ಪಕ್ಷ ತನ್ನ ಬಾವುಟ ಕೊಟ್ಟು ಪ್ರಚಾರಕ್ಕಿಳಿಸಲಿದೆ.

ಡಿಸೆಂಬರ್‌ 12ರ ಅಸೆಂಬ್ಲಿ ಚುನಾವಣೆಯ ಕಾವು ಈಗ ಗುಜರಾತಿನಲ್ಲಿ ಜೋರಾಗಿದೆ. ಕಳೆದ ಐದೈರು ತಿಂಗಳಲ್ಲಿ ಪದೇಪದೇ ಹತ್ತಿ ಉರಿದಿರುವ ರಾಜ್ಯದಲ್ಲಿ ನರೇಂದ್ರ ಮೋದಿಗೆ ಕೊಂಚವಾದರೂ ಮಸಿ ತಾಕಿರುವುದಂತೂ ದಿಟ. ತಾನೇ ಮುಂದಿನ ಮುಖ್ಯಮಂತ್ರಿ ಎಂದು ಎದೆ ತಟ್ಟಿಕೊಂಡು ಮೋದಿ ಈಗಾಗಲೇ ಹೇಳುತ್ತಿದ್ದರೂ, ಅವರ ಸಪೋರ್ಟಿಗೆ ತಾರಾ ಬಳಗವನ್ನು ನಿಲ್ಲಿಸಲು ಖುದ್ದು ಪ್ರಧಾನಿ ವಾಜಪೇಯಿ ಹಾಗೂ ಗೃಹ ಸಚಿವ ಎಲ್‌.ಕೆ. ಅಡ್ವಾಣಿ ತೀರ್ಮಾನಿಸಿದ್ದಾರೆ. ಮಂತ್ರಿಗಳಾದ ಶತ್ರುಘ್ನ ಸಿನ್ಹ ಮತ್ತು ವಿನೋದ್‌ ಖನ್ನ ಜೊತೆಗಿದ್ದೇ ಇರುತ್ತಾರೆ.

ಮಕ್ಕಳ ಮನಸ್ಸನ್ನು ಗೆದ್ದಿರುವ 'ಶಕ್ತಿಮಾನ್‌" ಖ್ಯಾತಿಯ ಮುಕೇಶ್‌ ಖನ್ನ , ಮಕ್ಕಳನ್ನು ಪುಸಲಾಯಿಸಿ ಅಪ್ಪ- ಅಮ್ಮಂದಿರಿಗೆ ಬಿಜೆಪಿಗೇ ಓಟು ಕೊಡಿ ಎಂದು ಕೇಳಲು ಮುಂದಾಗಿರುವುದೂ ತನ್ನ ಪ್ರಚಾರದ ಅಡ್ವಾಂಟೇಜ್‌ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ತಾರಾ ಬಳಗ ಪ್ರಚಾರದಲ್ಲಿ ಮುಂದೆ ಮುಂದೆ ನಡೆದರೆ, ಅವರ ಬೆನ್ನಲ್ಲೇ ವಾಜಪೇಟಿ ಹಾಗೂ ಅಡ್ವಾಣಿ ಪ್ರಚಾರ ಭಾಷಣ ಮಾಡಲಿದ್ದಾರೆ. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‌ ನೇತೃತ್ವದಲ್ಲಿ ಪ್ರಚಾರಕ್ಕಾಗಿಯೇ ಪಕ್ಷ ರಚಿಸಿರುವ ಸಮಿತಿ ಈ ಮಾಹಿತಿಗಳನ್ನು ಕೊಟ್ಟಿದೆ.

(ಪಿಟಿಐ)

ಮುಖಪುಟ / ಸ್ಯಾಂಡಲ್‌ವುಡ್‌

English summary
Hemamalini and Juhi to campaign for BJP in Gujrath election
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada