»   » ಇಂದಿರಾಗಾಂಧಿ ಪಾತ್ರದಲ್ಲಿ ಮೊನಿಷಾ ಕೊಯಿರಾಲ

ಇಂದಿರಾಗಾಂಧಿ ಪಾತ್ರದಲ್ಲಿ ಮೊನಿಷಾ ಕೊಯಿರಾಲ

Posted By: Staff
Subscribe to Filmibeat Kannada

'ಭಾರತದ ಏಕೈಕ ಪುರುಷ" ಎಂದು ಕರೆಸಿಕೊಳ್ಳುತ್ತಿದ್ದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಬದುಕನ್ನು ತೆರೆಗೆ ತರುವ ಸಾಹಸಕ್ಕೆ ಬಾಲಿವುಡ್‌ ಮುಂದಾಗಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ಪ್ರಸಿದ್ಧ ಅಭಿನೇತ್ರಿ ಮೊನಿಷಾ ಕೊಯಿರಾಲ ಅಭಿನಯಿಸುತ್ತಿರುವುದು ಚಿತ್ರದ ವಿಶೇಷ.

ಇಂದಿರಾ ಅವರ ಬದುಕು-ಸಾಧನೆಗಳನ್ನು ತೆರೆಗೆ ತರುತ್ತಿರುವ ಮೊಟ್ಟ ಮೊದಲ ಪ್ರಯತ್ನ ತಮ್ಮದು ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕ ನಿತಿನ್‌ ಕಿಣಿ Indira GandhiA Tryst with Destiny ಬಹುಕೋಟಿ ಚಿತ್ರದ ಕುರಿತು ಹೇಳುತ್ತಾರೆ.

ಇಂದಿರಾ ಪಾತ್ರಕ್ಕೆ ಮೊನಿಷಾ ಕೊಯಿರಾಲ ಅವರ ಆಯ್ಕೆ ಒಮ್ಮೆಗೇ ಆದದ್ದೇನಲ್ಲ . ಇಂದಿರಾ ಅವರ ಪಾತ್ರವನ್ನು ತಬು ಮಾಡಿದರೆ ಚೆನ್ನ ಎಂದು ನಿತಿನ್‌ ಮೊದಲಿಗೆ ಯೋಚಿಸಿದ್ದರು. ಆದರೆ, ತಬು ಎತ್ತರ ಪಾತ್ರಕ್ಕೆ ಹೊಂದಿಕೊಳ್ಳುತ್ತಿರಲಿಲ್ಲವಾದ್ದರಿಂದ, ಇಂದಿರಾ ಪಾತ್ರ ಮೊನಿಷಾ ಪಾಲಾಯಿತು.

ಇಂದಿರಾ ಗಾಂಧಿ ಚಿತ್ರದ ಇತರ ತಾರಾಗಣ ಸದ್ಯದಲ್ಲೇ ಹೊರಬೀಳಲಿದೆ ಎನ್ನುತ್ತಾರೆ 'ಗದರ್‌" ಖ್ಯಾತಿಯ ನಿತಿನ್‌. ಎನ್‌.ಚಂದ್ರ ಇಂದಿರಾ ಸಿನಿಮಾದ ನಿರ್ದೇಶಕರು. ಪಂಡಿತ್‌ ಹೃದಯನಾಥ್‌ ಮಂಗೇಶ್ಕರ್‌ ಸಂಗೀತ ನೀಡಲಿದ್ದಾರೆ. ಮೊದಲಿಗೆ ಹಿಂದಿಯಲ್ಲಿ ತಯಾರಾಗುವ ಚಿತ್ರ, ಆನಂತರದಲ್ಲಿ ಇಂಗ್ಲಿಷ್‌ಗೆ ಡಬ್‌ ಆಗಲಿದೆ.

2003 ನೇ ಇಸವಿ ಜನವರಿಯಲ್ಲಿ ನಿತಿನ್‌ರ 'ಇಂದಿರಾ ಗಾಂಧಿ" ಚಿತ್ರ ಸೆಟ್ಟೇರಲಿದೆ. ವರ್ಷದ ಕೊನೆಗೆ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ.

ಚಿತ್ರಕ್ಕೆ ಸ್ಕಿೃಪ್ಟ್‌ ಬರೆಯುತ್ತಿರುವ ಕಮಲೇಶ್ವರ್‌ ಈ ಮುನ್ನ ವಿವಾದಕ್ಕೆ ಸಿಲುಕಿದವರು. 1975 ರಲ್ಲಿ ಕಮಲೇಶ್ವರ್‌ ಅವರು ಬರೆದಿದ್ದ 'ಆಂಧಿ" ಚಿತ್ರಕತೆಯ ಪಾತ್ರವೊಂದು ಇಂದಿರಾಗಾಂಧಿ ಅವರನ್ನು ಹೋಲುತ್ತದೆನ್ನುವ ವರದಿಗಳ ಹಿನ್ನೆಲೆಯಲ್ಲಿ ಅದನ್ನು ಭಾರತ ಸರ್ಕಾರ ನಿಷೇಧಿಸಿತ್ತು. ಪ್ರಸ್ತುತದ ಚಿತ್ರ ಸಂಪೂರ್ಣ ವಿವಾದಮುಕ್ತ ಎನ್ನುತ್ತಾರೆ ಕಮಲೇಶ್ವರ್‌.(ಏಜೆನ್ಸೀಸ್‌)

English summary
Manisha Koirala to play Indira Gandhi
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada