»   » 12ಸಲ ಮೇಕಪ್‌ ಬದಲಿಸಿದ ಶಿವಣ್ಣ!

12ಸಲ ಮೇಕಪ್‌ ಬದಲಿಸಿದ ಶಿವಣ್ಣ!

Subscribe to Filmibeat Kannada

ಒಂದೇ ದಿನ 12 ವೈವಿಧ್ಯಮಯ ಮೇಕಪ್‌ಗೆ ನಟ ಶಿವರಾಜ್‌ಕುಮಾರ್‌ ಮುಖವೊಡ್ಡಿದ್ದು, ಚಿತ್ರದ ವೈಶಿಷ್ಟ್ಯಗಳಲ್ಲಿ ಒಂದು. ಎಂಟು ವೈವಿಧ್ಯಮಯ ಸೆಟ್‌ಗಳಲ್ಲಿ ಚಿತ್ರವನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದ್ದು, ಎರಡನೇ ಹಂತದ ಚಿತ್ರೀಕರಣ ಜ.5ರಿಂದ ಆರಂಭಗೊಳ್ಳಲಿದೆ.

ಐತಿಹಾಸಿಕ ಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ‘ಕುಮಾರರಾಮ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಭಾರ್ಗವ ಅವರಿಗೆ ಇದು 50ನೇ ಚಿತ್ರ.

ಸುಂದರನಾಥ ಸುವರ್ಣ ಚಿತ್ರಕ್ಕೆ ಕ್ಯಾಮರ ಹಿಡಿದಿದ್ದಾರೆ. ಸು.ರುದ್ರಮುನಿ ಶಾಸ್ತ್ರಿ ಮತ್ತು ವೀರಪ್ಪ ಮರಳವಾಡಿ ಜಂಟಿಯಾಗಿ ಸಂಭಾಷಣೆ ಹೆಣೆದಿದ್ದಾರೆ.

ಶ್ರೀನಾಥ್‌, ರಂಭಾ, ಶ್ರೀನಿವಾಸ ಮೂರ್ತಿ, ಅಶೋಕ್‌, ರಮೇಶ್‌ ಭಟ್‌, ದೊಡ್ಡಣ್ಣ, ಅವಿನಾಶ್‌, ಸಿ.ಆರ್‌.ಸಿಂಹ, ಶೋಭರಾಜ್‌, ರಾಜೇಶ್‌ ಮತ್ತಿತರರು ತಾರಾಗಣದಲ್ಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada