ಪಂಜಾಬಿ ಹುಡುಗಿ ಮಲ್ಲಿಕಾ ಕಪೂರ್‌ಳ ‘ಸವಿ ಸವಿ ನೆನಪು’!
ಪಂಜಾಬಿ ಹುಡುಗಿ ಮಲ್ಲಿಕಾ ಕಪೂರ್, ‘ಸವಿ ಸವಿ ನೆನಪು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಲಿದ್ದಾರೆ. ಈ ಚಿತ್ರದ ನಾಯಕ ‘ನೆನಪಿರಲಿ’, ‘ಜೊತೆಜೊತೆಯಲಿ’ ಖ್ಯಾತಿಯ ಪ್ರೇಮ್. ಚಿತ್ರ ಡಿ.24ರಂದು ಸೆಟ್ಟೇರಲಿದೆ.
ಸದ್ಯಕ್ಕೆ ಮುಂಬೈನಲ್ಲಿರುವ ಮಲ್ಲಿಕಾ, ಮಲಯಾಳಂ ಚಿತ್ರಗಳ ಮೂಲಕ ಬಣ್ಣದ ಪ್ರಪಂಚ ಕಂಡವರು. ನಂತರ ಭರತ್ ಮತ್ತು ಅರ್ಜುನ್ ಸರ್ಜಾ ಜೊತೆ ನಾಯಕಿಯಾಗಿ ತಮಿಳು ಸಿನಿಮಾಗಳಲ್ಲಿ ಮಿಂಚಿದವರು.
ಈಗ ಒಂದು ಕೈ ನೋಡೇ ಬಿಡೋಣ ಎಂದು ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಪ್ರೇಕ್ಷಕರು ಕೈ ಹಿಡಿಯುವರೋ, ಕೈ ಕೊಡುವರೋ ಗೊತ್ತಿಲ್ಲ.
‘ತೆನಾಲಿ ರಾಮ’, ‘ಹನಿಮೂನ್ ಎಕ್ಸ್‌ಪ್ರೆಸ್’ ಚಿತ್ರಗಳ ನಿರ್ಮಿಸಿ, ಪ್ರೇಕ್ಷಕರ ಮಧ್ಯೆ ಕಾಮಿಡಿ ನಿರ್ಮಾಪಕ ಎಂದು ಖ್ಯಾತರಾಗಿದ್ದ ಎಸ್.ವಿ.ಬಾಬು, ‘ಸವಿ ಸವಿ ನೆನಪು’ ನಿರ್ಮಾಪಕರು. ‘ಸೆವೆನ್ ಓ ಕ್ಲಾಕ್’ ಮೂಲಕ, ‘ಥರ ಥರ ಹೊಸ ಥರ’ ಸೃಷ್ಟಿಸಿದ ಸಂತೋಶ್ ರೈ ಪಾತಾಜೆ, ಆ್ಯಕ್ಷನ್-ಕಟ್ ಹೇಳಲು ತಯಾರಿ ನಡೆಸಿದ್ದಾರೆ. ಇದು ಅಪ್ಪಟ ಸ್ವಮೇಕ್ ಚಿತ್ರ.


Click it and Unblock the Notifications