»   » ಸಂಜಯದತ್‌ ಶರಣಾಗತಿಗೆ ಜ.18ರತನಕ ಕಾಲಾವಕಾಶ

ಸಂಜಯದತ್‌ ಶರಣಾಗತಿಗೆ ಜ.18ರತನಕ ಕಾಲಾವಕಾಶ

Subscribe to Filmibeat Kannada


ಮುಂಬಯಿ : ಬಾಲಿವುಡ್‌ ತಾರೆ ಸಂಜಯದತ್‌ ಪ್ರಾಧಿಕಾರದ ಮುಂದೆ ಶರಣಾಗಲು ಟಾಡಾ ನ್ಯಾಯಾಲಯ, ಜನವರಿ 18ರವರೆಗೆ ಕಾಲಾವಕಾಶ ನೀಡಿದೆ.

ಗುರುವಾರ ಹಿರಿಯ ವಕೀಲ ವಿ.ಆರ್‌.ಮನೋಹರ್‌, ಸಂಜಯದತ್‌ಗೆ ನೀಡಬಹುದಾದ ಶಿಕ್ಷೆ ಪ್ರಮಾಣ ಕುರಿತು ವಾದ ಮಂಡಿಸಿದರು. ಕೆನೆಬಣ್ಣದ ಅಂಗಿ, ನೀಲಿಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸಿದ್ದ ಸಂಜಯ್‌ದತ್‌ ಕೋರ್ಟ್‌ಗೆ ಆಗಮಿಸಿದರು.

1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ, ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಸಂಜಯದತ್‌ ತಪ್ಪಿತಸ್ಥ ಎಂದು ಟಾಡಾ ನ್ಯಾಯಾಲಯ ನವೆಂಬರ್‌ 28ರಂದು ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

(ಯುಎನ್‌ಐ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada