For Quick Alerts
  ALLOW NOTIFICATIONS  
  For Daily Alerts

  ಅಂಬರೀಷ್ 60ನೇ ಹುಟ್ಟುಹಬ್ಬಕ್ಕೆ ಚಿತ್ರರಂಗ ಸಜ್ಜು

  |

  ಕನ್ನಡದ ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಷ್ ಅವರ 60 ನೇ ಹುಟ್ಟುಹಬ್ಬ ಸಮೀಪಿಸಿದೆ. ಮುಂದಿನ ತಿಂಗಳು, ಮೇ 29ರಂದು ನಡೆಯುವ ಅಂಬರೀಷ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಚಿತ್ರರಂಗ ನಿರ್ಧರಿಸಿದೆ. ಅಂಬಿ ಚಿತ್ರರಂಗಕ್ಕೆ ಬಂದು 40 ವರ್ಷಗಳಾಗಿವೆ. ಈ ಸಂಬಂಧ ಬೆಂಗಳೂರಿನ ಅರಮನೆ ಆವರಣದಲ್ಲಿ ಮೇ 27, 28 ಹಾಗೂ 29, 2012 ರಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

  ಬೆಂಗಳೂರಿನಲ್ಲಿ ನಡೆದ ಅಂಬರೀಷ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಬಹಿರಂಗಗೊಂಡಿದ್ದು ಅದ್ದೂರಿ ಆಚರಣೆ ಸಲುವಾಗಿ ಮೂರು ದಿನ, ಅಂದರೆ 27, 28 ಹಾಗೂ 29 ರಂದು ಇಡೀ ಕನ್ನಡ ಚಿತ್ರೋದ್ಯಮದ ಚಟುವಟಿಕೆ ಸ್ಥಗಿತಗೊಳ್ಳಲಿದೆ. ಕನ್ನಡದ ನಟ-ನಟಿಯರು, ಗಣ್ಯರು, ಅರ್ಥಾತ್ ಸಂಪೂರ್ಣ ಚಿತ್ರದ್ಯೋಮ ಅಂಬರೀಷ್ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಮಾಡಲು ಸಿದ್ಧವಾಗಿದೆ. ಜೊತೆಗೆ ನೆರೆಭಾಷೆ ಹಾಗೂ ಪರಭಾಷೆಯಿಂದಲೂ ಗಣ್ಯರು ಆಗಮಿಸುವ ಸಾಧ್ಯತೆಯಿದೆ.

  ನಟರಾದ ದರ್ಶನ್, ರಮೇಶ್, ಉಪೇಂದ್ರ, ದುನಿಯಾ ವಿಜಯ್ ಹಾಗೂ ನಟಿಯರಾದ ಶ್ರುತಿ, ಹರಿಪ್ರಿಯಾ ಅಲ್ಲದೇ ನಿರ್ದೇಶಕ ಎಸ್ ನಾರಾಯಣ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದು ಪಕ್ಕಾ ಆಗಿದೆ. ಉಳಿದಂತೆ ಯಾವ್ಯಾವ ನಟರು, ನಟಿಯರು ಕಾರ್ಯಕ್ರಮದಲ್ಲಿ ಅಂದು ಉಪಸ್ಥಿತರಿರುವರು ಎಂಬುದು ಶೀಘ್ರದಲ್ಲೇ ನಿರ್ಧಾರವಾಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Actor Ambarish's 60th Birthday to Celebrate in Bangalore Palace Ground on May 29 2012. Kannada Film Industry will be involved totally in this function on 27, 28 and 29th of May 2012. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X