ಚಾಲೆಂಜಿಂಗ್ ಸ್ಟಾರ್ ಮತ್ತೊಂದು ಆನೆ ದತ್ತು ಸ್ವೀಕಾರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯ. ಪ್ರಾಣಿ ಪಕ್ಷಿಗಳೆಂದರೆ ಅವರಿಗೆ ಎಲ್ಲಿಲ್ಲದ ಅಕ್ಕರೆ. ಈ ಹಿಂದೊಮ್ಮೆ ಅವರು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಆನೆ ಮರಿ ಮಾದೇಶನನ್ನು ದತ್ತು ಪಡೆದಿದ್ದರು. ಈಗ ಮತ್ತೊಂದು ಆನೆಯನ್ನು ದತ್ತು ಪಡೆದಿದ್ದಾರೆ.
ಇತ್ತೀಚೆಗೆ ಮೈಸೂರು ಮೃಗಾಲಯಕ್ಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಅಧಿಕಾರಿಗಳಿಗೆ ಆನೆಯ ಲಾಲನೆ ಪಾಲನೆ ನೋಡಿಕೊಳ್ಳಲು ಅವರು ರು.35,000 ನೀಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಅವರ ಪ್ರಾಣಿಗಳ ಬಗೆಗಿನ ಕಾಳಜಿ ಸಾಬೀತಾಗಿದೆ.
ತಮ್ಮ ಬಿಡುವಿನ ವೇಳೆಯನ್ನು ಪ್ರಾಣಿಗಳೊಂದಿಗೆ ಕಳೆಯುವುದೆಂದರೆ ದರ್ಶನ್ ಗೆ ಎಲ್ಲಿಲ್ಲದ ಖುಷಿ.ಅವರ ತೋಟದ ಮನೆಯಲ್ಲಿ ಮುದ್ದಾದ ನಾಯಿಮರಿಗಳು, ಕುದುರೆಗಳು, ಹಸುಗಳು ಹಾಗೂ ಕೆಲವೊಂದು ಆಕರ್ಷಕವಾಗಿರುವ ಪಕ್ಷಿಗಳನ್ನು ಕಾಣಬಹುದು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Challenging Star Darshan has adopted another elephant in the Mysore Zoo and gave away an amount of Rs 35000 to the Zoo authorities for its maintenance. Earlier he has adopted an elephant calf Madesha in same zoo.


Click it and Unblock the Notifications











