ಜ್ಯೋತಿಷಿ ಸಲಹೆ ಮೇರೆಗೆ ಕುಕ್ಕೆಗೆ ನಟ ದರ್ಶನ್ ಭೇಟಿ

By Rajendra

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್‌ರೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಭಾಗ್ಯ ಪಡೆದರು. ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ಅವರ ಆಶೀರ್ವಚನ ಪಡೆದು ಬಳಿಕ ಅವರು ಅಳದಂಗಡಿ ಶ್ರೀಸೋಮೇಶ್ವರನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು.

ಅಲ್ಲಿ ಹೆಚ್ಚು ಸಮಯ ಕಳೆಯದೆ ದೇವಿಯ ಹಾಗೂ ಗಣೇಶನ ದರ್ಶನ ಪಡೆದು ತರಾತುರಿಯಲ್ಲಿ ಪೂಜೆ ಮುಗಿಸಿ ಐದೇ ನಿಮಿಷಕ್ಕೆ ಅಲ್ಲಿಂದ ಹೊರಟರು. ಇತ್ತೀಚೆಗಷ್ಟೇ ದರ್ಶನ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮುಡಿ ಸಪರ್ಪಿಸಿದ್ದರು.

ಈಗ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ತಮ್ಮ ಹರಕೆ ಸಲ್ಲಿಸಿದ್ದಾರೆ. ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ದರ್ಶನ್ ಅಳದಂಗಡಿಗೆ ಭೇಟಿ ನೀಡಿದ್ದಾಗಿ ತಿಳಿದುಬಂದಿದೆ. ಆದರೆ ದರ್ಶನ್ ಅವರನ್ನು ಭೇಟಿ ಮಾಡಲು ಅವರ ಅಪಾರ ಅಭಿಮಾನಿ ಬಳಗಕ್ಕೆ ಸಾಧ್ಯವಾಗಲಿಲ್ಲ. ಅವರು ಅಲ್ಲಿಂದ ಶೀಘ್ರವಾಗಿ ಹೊರಟುಬಿಟ್ಟರು.

ದೇವಳದ ಆಡಳಿತ ಮೊಕ್ತೇಸರ ಡಾ.ಪದ್ಮಪ್ರಸಾದ ಅಜಿಲ ಹಾಗೂ ಸತ್ಯ ದೇವತೆ ದೇವಳದ ಶಿವಪ್ರಸಾದ ಅಜಿಲ ಅವರು ತಮ್ಮ ಮನೆಗೆ ಆಹ್ವಾನ ನೀಡಿದರು. ಆದರೆ ಯಾವುದಕ್ಕೂ ಪ್ರತಿಕ್ರಿಯಿಸದೆ ದರ್ಶನ್ ಅಲ್ಲಿಂದ ಹೊರಟು ಹೋಗಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ಕೊಂಚ ನಿರಾಶೆಯಾಯಿತು. (ಏಜೆನ್ಸೀಸ್)

More from Filmibeat

English summary
Kannada actor Challenging Star Darshan and his family visited the renowned religious shrine of in the Sullia taluk of Dakshina Kannada District near Mangalore, Karnataka. He performed special pooja to Lord Subrahmanya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X