»   » ಗಣೇಶ್, ವೇದಿಕಾರ ಸಂಗಮ ಈ ವಾರ ತೆರೆಗೆ

ಗಣೇಶ್, ವೇದಿಕಾರ ಸಂಗಮ ಈ ವಾರ ತೆರೆಗೆ

Subscribe to Filmibeat Kannada

ಎಸ್.ವಿ.ಪಿಕ್ಚರ್ಸ್‌ನ ಹೆಮ್ಮೆಯ ಕೊಡುಗೆ 'ಸಂಗಮ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. 'ಆಗಲಿ ಸಂಗi ನಮ್ಮ ಹೃದಯದ ಸಂಗಮ ಎಂದು ಚಿತ್ರದ ಹಾಡೊಂದು ಹೇಳುವಂತೆ ಮಿಡಿದ ಹೃದಯಗಳಿಗೆ ಈ ಸಂಗಮ ಅಸರೆಯಾಗಲಿದೆ. ಸಂಗಮ ಪ್ರೇಮಕಥೆಯಾದರೂ ಅದರ ನಿರೂಪಣೆ ವಿಭಿನ್ನ ಎನ್ನುವುದು ನಿರ್ದೇಶಕರ ಅಭಿಪ್ರಾಯ.

ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ದುಡಿದು ಅನುಭವವಿರುವ ರವಿವರ್ಮರನ್ನು ಎಸ್.ವಿ.ಬಾಬು ಅವರು ಈ ಚಿತ್ರದಿಂದ ಪೂರ್ಣಪ್ರಮಾಣದ ನಿರ್ದೇಶಕರನಾಗಿದ್ದಾರೆ. ಪರಿಶುದ್ದ ಪ್ರೇಮ, ಹಾಸ್ಯ ಹಾಗೂ ವಾತ್ಸಲ್ಯ ಸನ್ನಿವೇಶಗಳ ಸಂಗಮಕ್ಕೆ ನಿರ್ದೇಶಕರೇ ಚಿತ್ರಕಥೆ ಬರೆದಿದ್ದಾರೆ.

ಗಣೇಶ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಕನ್ನಡತಿ ವೇದಿಕಾ ನಾಯಕಿಯಾಗಿದ್ದಾರೆ. ದಕ್ಷಿಣಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್ ಕವಿರಾಜ್ ಬರೆದಿರುವ ಆರು ಹಾಡುಗಳಿಗೆ ರಾಗಸಂಯೋಜಿಸಿದ್ದಾರೆ ಹಾಗೂ' ದಿಲ್ ಮಾಂಗೆ ಮೋರ್ 'ಎಂಬ ಗೀತೆಗೆ ಧ್ವನಿಯಾಗಿದ್ದಾರೆ. ಈ ಹೆಸರಾಂತ ಸಂಗೀತ ನಿರ್ದೇಶಕರನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಎಸ್.ವಿ.ಬಾಬು ಅವರ ಪಾಲಾಗಿದೆ.

ಸಂಜಯ್‌ಬಾಬು ನಿರ್ಮಾಣದ ಸಂಗಮ ಚಿತ್ರಕ್ಕೆ ಶೇಖರ್‌ಚಂದ್ರರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಕಲೆ, ಗಂಡಸಿ ನಾಗರಾಜ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಗಣೇಶ್, ವೇದಿಕಾ, ರಂಗಾಯಣರಘು, ಕೋಮಲ್, ಸಾಧುಕೋಕಿಲ, ಧರ್ಮ, ತುಳಸಿಶಿವಮಣಿ, ಬಿ.ಜಯಮ್ಮ, ಬ್ರಹ್ಮಾವರ್, ಶಾಂತಮ್ಮ, ಕೋಟೆ ಪ್ರಭಾಕರ್, ಯಶಸ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಗಣೇಶ್, ವೇದಿಕಾ ಸಂಗಮಕ್ಕೆ ಡಿಟಿಎಸ್ ಸ್ಪರ್ಶ
ತವರಿಗೆ ಬಂದಿಹಳು 'ಸಂಗಮ' ಚಿತ್ರದ ಚೆಲುವೆ ಕನ್ನಡತಿ ವೇದಿಕಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada