»   » ಕನ್ನಡದ ಜಮಾನಕ್ಕೆ ಹಿಂದಿಯ ಜಾಕಿ ಶ್ರಾಫ್

ಕನ್ನಡದ ಜಮಾನಕ್ಕೆ ಹಿಂದಿಯ ಜಾಕಿ ಶ್ರಾಫ್

Subscribe to Filmibeat Kannada

ಕಿಶನ್ ನಿರ್ದೇಶನದ ಕೇರ್ ಆಫ್ ಫುಟ್ ಪಾತ್ ಚಿತ್ರಕ್ಕೆ ಫ್ರೀ ಕಾಲ್ ಶೀಟ್ ನೀಡಿದ್ದ ಜಾಕಿಶ್ರಾಫ್ ಈಗ 'ಜಮಾನ' ಚಿತ್ರದಲ್ಲಿ ನಟಿಸಿದ್ದಾರೆ. ಲಕ್ಕಿಶಂಕರ್ ನಿರ್ದೇಶನದ ಈ ಚಿತ್ರಕ್ಕೆ ಸ್ವತಃ ತಾವೇ ಡಬ್ ಮಾಡಿದ್ದಾರೆ. ಚಿತ್ರದಲ್ಲಿ ಮುಕ್ಕಾಲು ಪಾಲು ಕಾಣಿಸಿಕೊಳ್ಳಲಿರುವ ಜಾಕಿ, ಚಿತ್ರೀಕರಣ ಸಂದರ್ಭದಲ್ಲೇ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಬೇಕೆಂದು ಅಂದುಕೊಂಡಿದ್ದರಂತೆ.

ಪ್ರಸ್ತುತ ಹಿಂದಿಯಲ್ಲಿ ಬ್ಯುಸಿಯಾಗಿರುವುದರಿಂದ ಚಿತ್ರತಂಡ ಮುಂಬೈಗೆ ಹೋಗಿ ಡಬ್ ಮಾಡಿಕೊಂಡು ಬಂದಿದೆ. ತಾವು ಬರೆದುಕೊಟ್ಟ ಡೈಲಾಗ್ ಗಳ ಅರ್ಥ ತಿಳಿದುಕೊಂಡು ಡಬ್ ಮಾಡಿದ್ದಾರೆ ಎಂದು ಹೇಳುತ್ತಾರೆ ನಿರ್ದೇಶಕ ಲಕ್ಕಿಶಂಕರ್. ಮೈಸೂರು ಚೇತನ್ ನಿರ್ಮಿಸಿರುವ ಈ ಚಿತ್ರಕ್ಕೆ ನಿತೀಶ್ ನಾಯಕನಾಗಿ (ಹೊಸ ಮುಖ) ನಟಿಸಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ, ಇದೇ ಪ್ರಥಮ ಬಾರಿಗೆ ಬಂಗಾಳಿ ನಟ ವಿನೋದ್ ಕುಮಾರ್ ಸಹ ಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರ ಸಾಹಸ ಪ್ರಧಾನವಾದ ಚಿತ್ರವಾದ್ದರಿಂದ ಕೆಲಸ ತಡವಾಯಿತು. ಇನ್ನು ಒಂದೂವರೆ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ. ಮಳೆ ಹಾಗೂ ಕೆಲವು ಕಡೆ ಶೂಟಿಂಗ್ ನಡೆಸಲು ಅನುಮತಿ ಸಿಗದೆ ಇದ್ದ ಕಾರಣ ತಡವಾಯಿತು. ಒಂದು ಹಾಡನ್ನು ಕರ್ನಾಟಕದ 20 ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರೀಕರಿಸಿದ್ದಾರಂತೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada