ಮದುವೆಯ ನಂತರ ಕಣ್ಣುಮುಚ್ಚಾಲೆಗೆ ಕಡಿವಾಣ ಹಾಕಿ

ಹಿರಿಯ ನಟ ಮನದೀಪ್ ರಾಯ್ ನಿರ್ದೇಶಕನಾಗಲು ಹೊರಟಿದ್ದಾರೆ. ಜನವರಿ 18, 2012ಕ್ಕೆ ಮುಹೂರ್ತ ಕೂಡ ನಿಗದಿಯಾಗಿದೆ. ಶಂಕರ್ ನಾಗ್ ಮಿತ್ರರೂ ಆಗಿರುವ ನಟ ಮನದೀಪ್ ರಾಯ್, ಹೊಸ ವಿಭಿನ್ನ ಕಥೆಯೊಂದನ್ನು ನಿರ್ದೇಶನಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ಹೆಸರು ಸದ್ಯಕ್ಕೆ 'ಹುಟ್ಟುಗುಣ'.

ಹೆಸರು ಬದಲಾಗುವ ಸಾಧ್ಯತೆ ಇದೆಯಂತೆ. ನಾಯಕ ನಟರಾಗಿ ರವಿಶಂಕರ್ ಹಾಗೂ ವಿಜಯ ರಾಘವೇಂದ್ರ ಆಯ್ಕೆಯಾಗಿದ್ದು ಇನ್ನೊಬ್ಬ ನಾಯಕನ ಹುಡುಕಾಟ ನಡೆದಿದೆ. ಪ್ರಮುಖ ಪಾತ್ರಧಾರಿಯಾಗಿ ನಟಿ 'ಸುಮನ್ ರಂಗನಾಥ್' ನಟಿಸಲಿದ್ದಾರೆ. ಮನದೀಪ್ ರಾಯ್ ಇರುವುದರಿಂದ ಕಾಮಿಡಿ ಚಿತ್ರದಲ್ಲಿ ಬೋನಸ್.

ಮದುವೆಯ ನಂತರ ಬೇರೆ ಸಂಬಂಧ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂಬ ಸಂದೇಶ ಚಿತ್ರದಲ್ಲಿದೆಯಂತೆ. ಮದುವೆಯ ನಂತರ ಕಣ್ಣುಮುಚ್ಚಾಲೆಗೆ ಕಡಿವಾಣ ಹಾಕಿ ಎನ್ನಲಿದ್ದಾರೆ ನಿರ್ದೇಶಕರು, ಮದುವೆಯ ಮೊದಲು ಎಷ್ಟು ಸಂಬಂಧಗಳನ್ನು ಬೇಕಾದರೂ ಇಟ್ಟುಕೊಳ್ಳಬಹುದಾ ಎಂಬ ಪ್ರಶ್ನೆಗೂ ನಿರ್ದೇಶಕರು ಉತ್ತರ ಹೇಳಬಹುದೇನೋ! ಎಲ್ಲದಕ್ಕೂ ಮನದೀಪ್ ರಾಯ್ ಕೇಳಿ ಅಥವಾ ಚಿತ್ರನೋಡಿ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actor Mandeep Roy directs movie Huttuguna. It will start on 18th January 2012. Vijayaraghavendra and Ravishankar are the heros. Suman Ranganath is in important role. Searching for another hero.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X