ಕ್ಲೈಮ್ಯಾಕ್ಸ್ ಶೂಟಿಂಗ್ ಹಂತ ತಲುಪಿದ ಶಿವಣ್ಣನ 'ಶಿವ'

'ಜೋಗಯ್ಯ ಮರೆತುಬಿಡಿ, ಶಿವ ನೋಡಿ' ಎಂದು ಶಿವಣ್ಣ ಸ್ವತಃ ಹೇಳುವ ಮೂಲಕ ಈ ಚಿತ್ರದ ನಿರೀಕ್ಷೆಯನ್ನು ಇನ್ನೂ ಹೆಚ್ಚು ಮಾಡಿದ್ದಾರೆ. ಶಿವನ ಜೊತೆ ಪಾರ್ವತಿ(?)ಯಾಗಿ ಗ್ಲಾಮರ್ ಗರ್ಲ್ ಖ್ಯಾತಿಯ ರಾಗಿಣಿ ಇದ್ದಾರೆ. ಓಂ ನಿರ್ದೇಶನವೆಂದ ಮೇಲೆ ಅಲ್ಲಿ ಸಾಹಸ ಇದ್ದೇ ಇದೆ, ಹಾಗಾಗಿ ಶಿವತಾಂಡವ ನೋಡಲು ರೆಡಿಯಾಗಿ.
ಜನವರಿ 20ರೊಳಗೆ ಎಲ್ಲಾ ಹಂತದ ಚಿತ್ರೀಕರಣ ಪೂರ್ತಿಗೊಳಿಸುವ ಪ್ಲಾನ್ ಓಂ ಪ್ರಕಾಶ್ ರಾವ್ ಅವರದು. ಬಿರುಸಿನಿಂದ ಸಾಗುತ್ತಿರುವ ಚಿತ್ರೀಕರಣಕ್ಕೆ ಶಿವಣ್ಣ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರಂತೆ. ಗುರುಕಿರಣ್ ಸಂಗೀತವಿರುವ ಈ ಚಿತ್ರದಲ್ಲಿ ರವಿಶಂಕರ್ ಹಾಗೂ ವಿಜಯ ರಾಘವೇಂದ್ರ ಕೂಡ ನಟಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Hat Trick Hero Shivarajkumar upcoming movie Shiva's shooting is going on briskly. Om Prakash Rao Direts the movie. Ragini is the Heroine and Ravishankar, Viajaya Raghavendra performs important role.


Click it and Unblock the Notifications











