ತೆಲುಗು ಕಿಕ್ ಕನ್ನಡಕ್ಕೆ ತರುತ್ತಿದ್ದಾರೆ ನಲ್ಲ ಸುದೀಪ್
ನಲ್ಲ ಸುದೀಪ್ ಮತ್ತೊಂದು ರೀಮೇಕ್ ಚಿತ್ರಕ್ಕೆ ಸಹಿಹಾಕಿದ್ದಾರೆ. ತೆಲುಗಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ 'ಕಿಕ್' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ ನಿರ್ಮಾಪಕ ಕೆಸಿಎನ್ ಕುಮಾರ್. ಕನ್ನಡದ 'ಕಿಕ್' ಡಿಸೆಂಬರ್‌ನಲ್ಲಿ ಸೆಟ್ಟೇರಲಿದೆ. ಮೂಲ ತೆಲುಗು ಚಿತ್ರದಲ್ಲಿ ರವಿತೇಜ ಹಾಗೂ ಇಲಿಯಾನಾ ಅಭಿನಯಿಸಿದ್ದರು.
ಸದ್ಯಕ್ಕೆ ಕಿಚ್ಚ ಸುದೀಪ್ ಹೈದರಾಬಾದಿನಲ್ಲಿದ್ದು, 'ಮಗಧೀರ' ಖ್ಯಾತಿಯ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' (ನೊಣ) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಹೈದರಾಬಾದಿನಲ್ಲಿ ಭರದಿಂದ ಸಾಗುತ್ತಿದ್ದು ಕೊನೆಯ ಹಂತಕ್ಕೆ ಬಂದು ತಲುಪಿದೆ.
ಹೈದರಾಬಾದಿನಲ್ಲಿರುವ ಸುದೀಪ್ ಅವರನ್ನು ಕೆಸಿಎನ್ ಕುಮಾರ್ ಅಲ್ಲಿಯೇ ಭೇಟಿ ಮಾಡಿ ಚಿತ್ರದ ನಿರ್ದೇಶಕ ಹಾಗೂ ನಾಯಕಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಏತನ್ಮಧ್ಯೆ ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ವಿಷ್ಣುವರ್ಧ' ಚಿತ್ರವೂ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. (ಏಜೆನ್ಸೀಸ್)
More from Filmibeat
English summary
Kannada actor Sudeep signed for another movie in Kannada. The movie is a remake of Telugu successful movie Kick. K.C.N.Kumar is producing the movie in Kannada.


Click it and Unblock the Notifications











