twitter
    For Quick Alerts
    ALLOW NOTIFICATIONS  
    For Daily Alerts

    ಬಳ್ಳಾರಿಯಲ್ಲಿ ಯು ಟರ್ನ್ ಹೊಡೆದ ನಟ ಸುದೀಪ್

    By Rajendra
    |

    ತೆಲುಗು, ಹಿಂದಿ, ತಮಿಳು ಇನ್ನಿತರೆ ಭಾಷೆಗಳ ಸಿನಿಮಾಗಳನ್ನು ಪ್ರೋತ್ಸಾಹಿಸಿ ಆದರೆ ಕನ್ನಡ ಚಿತ್ರಗಳನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ. ಕನ್ನಡ ಚಿತ್ರಗಳಿಗೆ ಮೊದಲು ಪ್ರಾಧಾನ್ಯತೆ ನೀಡಬೇಕು ಎಂದು ನಟ ಸುದೀಪ್ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಬಳ್ಳಾರಿಯಲ್ಲಿ ಹೇಳಿದ್ದಾರೆ.

    ಬಳ್ಳಾರಿ ನಟರಾಜ ಚಿತ್ರಮಂದಿರದಲ್ಲಿ ತಮ್ಮ ಲೇಟೆಸ್ಟ್ ಚಿತ್ರ 'ವಿಷ್ಣುವರ್ಧನ' ವೀಕ್ಷಿಸಿದ ಬಳಿಕ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿದರು. ರಾಜ್ಯದ ಗಡಿಪ್ರದೇಶದಲ್ಲಿ ಎರಡು ರಾಜ್ಯಗಳ ಪ್ರಜೆಗಳು ಸ್ನೇಹಪೂರ್ವಕವಾಗಿರಬೇಕು. ಪರಭಾಷಾ ಚಿತ್ರಗಳನ್ನು ಪ್ರೋತ್ಸಾಹಿಸಬೇಕು. ಕನ್ನಡ ಭಾಷೆಯನ್ನು ಮಾತ್ರ ಮರೆಯಬಾರದು ಎಂದು ಹಿತನುಡಿದಿದ್ದಾರೆ.

    ತಾನು ಖ್ಯಾತ ನಟ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ. ಅವರ ಹೆಸರಿನ ಚಿತ್ರದಲ್ಲಿ ಅಭಿನಯಿಸಿರುವುದು ನನ್ನ ಪಾಲಿಗೆ ಬಂದ ಅದೃಷ್ಟ ಎಂದರು. ಈ ಹಿಂದೆಮ್ಮೊ ಸುದೀಪ್ ಬ್ಲಡೀ ಫಕ್ಕರ್ಸ್! ನಾನ್ಯಾಕ್ರಿ ಇನ್ನೊಬ್ರ ಹೆಸರಿಟ್ಟುಕೊಳ್ಳಲಿ! ಎಂದದ್ದನ್ನು ಇಲ್ಲಿ ಧಾರಾಳವಾಗಿ ಸ್ಮರಿಸಬಹುದು. ಬಳಿಕ ಅವರು ಅಲ್ಲಿಂದ ಹೊಸಪೇಟೆಗೆ ಹೊರಟರು. (ಏಜೆನ್ಸೀಸ್)

    English summary
    Earlier Kannada actor Sudeep has used "filthy and vulgar" language against media and he said why I'm used another s name in my film. He speaks about his latest film Vishnuvardhana keeping in mind. Recently he said he is a fan of legendary actor Vishuvardhan in Bellary.
    Thursday, December 22, 2011, 19:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X