»   » ಯೋಗರಾಜ್ ಭಟ್ 'ಡ್ರಾಮಾ'ದಿಂದ ಭಾಮಾ ಔಟ್

ಯೋಗರಾಜ್ ಭಟ್ 'ಡ್ರಾಮಾ'ದಿಂದ ಭಾಮಾ ಔಟ್

Posted By:
Subscribe to Filmibeat Kannada

ಸದ್ಯದಲ್ಲೇ ಸೆಟ್ಟೇರಲಿರುವ ನಿರ್ದೇಶಕ ಯೋಗರಾಜ್ ಭಟ್ ಅವರ ಹೊಸ ಚಿತ್ರ' ಡ್ರಾಮಾ' ತಂಡದಿಂದ ನಟಿ ಭಾಮಾ ಹೊರಬಂದಿದ್ದಾರೆ. "ಡೇಟ್ಸ್ ಸಮಸ್ಯೆಯಿಂದ ನಾವು ಭಾಮಾ ಅವರನ್ನು ಬದಲಾಯಿಸುತ್ತಿದ್ದೇವೆ" ಎಂಬ ನೇರ ಉತ್ತರ ಭಟ್ಟರ ಕಡೆಯಿಂದ ಬಂದಿದೆ. ಇದರಲ್ಲಿ ಯಾವ 'ಡ್ರಾಮಾ' ನಡೆದಿಲ್ಲವೆಂಬುದು ಭಟ್ಟರ ಮಾತಿನ ಮೂಲಕ ಖಚಿತವಾದಂತಾಗಿದೆ.

ಈ ಹಿಂದೆ ಭಟ್ಟರ ಡ್ರಾಮಾಕ್ಕೆ ಕಳೆದ 18ರಂದು (ಫೆಬ್ರವರಿ 18, 2012) ಮುಹೂರ್ತ ಫಿಕ್ಸ್ ಆಗಿತ್ತು. ಆದರೆ ಅದೇ ದಿನ ಡ್ರಾಮಾ ನಾಯಕ ಯಶ್ ಚಿತ್ರ 'ಲಕ್ಕಿ' ಆಡಿಯೋ ಬಿಡುಗಡೆ ಸಮಾರಂಭ ಆಯೋಜಿಸಲ್ಪಟ್ಟು ಡ್ರಾಮಾ ಮುಹೂರ್ತ ಕೆಲವು ದಿನಗಳು ಮುಂದಕ್ಕೆ ಹೋಗಿದೆ. ಈಗ ಡ್ರಾಮಾ ಚಿತ್ರದಿಂದ ಭಾಮಾ 'ಔಟ್' ಆಗಿರುವ ಹೊಸ ಸುದ್ದಿ ಸೇರ್ಪಡೆಯಾಗಿದೆ. 

ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತವಿದೆ. ಮುಂಗಾರು ಮಳೆ ಕೃಷ್ಣ ಛಾಯಾಗ್ರಹಣ. ಪರಮಾತ್ಮ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಜಯಣ್ಣ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಇದೀಗ ಭಾಮಾ ಜಾಗಕ್ಕೆ ಯಾರು ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಭಟ್ಟರ ಚಿತ್ರಕ್ಕೆ ನಾಯಕಿ ಸಿಗುವುದು ಕಷ್ಟವೇ? (ಒನ್ ಇಂಡಿಯಾ ಕನ್ನಡ)

English summary
Actress Shailoo Fame Bhama came out from Yograj Bhat movie Drama, because of dates problem. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada