ಯಶ್ ಜೋಡಿಯಾದ ಪರಮಾತ್ಮನ ಸಾರಥಿ ದೀಪಾ

ನಾನಿನ್ನು ಕಲಿಯುವುದು ಸಾಕಷ್ಟಿದೆ. ಯೋಗರಾಜ್ ಭಟ್ ರಂಥ ಗುರುಗಳಿಂದ, ಪುನೀತ್ ರಂಥ ನಟರಿಂದ ತುಂಬಾ ಕಲಿತೆ.
ಈಗ ಯಶ್ ರಂಥ ಉತ್ತಮ ಡ್ಯಾನ್ಸರ್ ನಿಂದ ಡ್ಯಾನ್ಸಿಂಗ್ ನಲ್ಲಿ ಪರಿಣತಿ ಪಡೆಯುವ ಅವಕಾಶ ಸಿಕ್ಕಿದೆ. ಪ್ರೀತಂ ಗುಬ್ಬಿ ಸ್ಕ್ರಿಪ್ಟ್ ವರ್ಕ್ ತುಂಬಾ ಇಷ್ಟ. ನನಗೆಈವರೆಗೂ ಉತ್ತಮ ಪಾತ್ರಗಳು ಸಿಕ್ಕಿರುವುದು ತೃಪ್ತಿಕೊಟ್ಟಿದೆ ಎನ್ನುತ್ತಾರೆ ಅಚ್ಚಕನ್ನಡದ ಭವಿಷ್ಯದ ತಾರೆ ದೀಪಾ.
ವಾಗ್ಚತುರೆ ದೀಪಾ: ದರ್ಶನ್ ಸರ್ ಅವರ ಪರ್ಸನಲ್ ಲೈಫ್ ಬಗ್ಗೆ ನಾನೇನು ಹೇಳಲಾರೆ. ನಾನಿನ್ನು ಇಂಡಸ್ಟ್ರೀಗೆ ಈಗಷ್ಟೇ ಬಂದಿದ್ದೀನಿ. ಆದರೆ, ಮೊದಲ ಚಿತ್ರದ ಬಿಡುಗಡೆ ವಿಳಂಬ ಆಗಿರುವುದು ಕೊಂಚ ಬೇಸರ ತರಿಸಿದೆ. ಆದರೆ, ದರ್ಶನ್ ಕುಟುಂಬದ ಪರಿಸ್ಥಿತಿ ಅರ್ಥ ಆಗುತ್ತೆ ಎನ್ನುತ್ತಾರೆ ವಾಗ್ಚತುರೆ ದೀಪಾ.
ಇಂಜಿನಿಯರ್ ಪದವೀಧರೆ(ಆರ್ಕಿಟೆಕ್ಟ್) ಅಷ್ಟೇ ಅಲ್ಲದೆ ಅಭರಣ ವಿನ್ಯಾಸದಲ್ಲೂ ದೀಪಾ ಪ್ರವೀಣೆ. ಪರಮಾತ್ಮ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪಟಪಟನೆ ಮಾತನಾಡಿದ ದೀಪಾಳಿಗೆ ಆಫರ್ ನೀಡಲು ಅನೇಕ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರಂತೆ. ದೀಪಾ ಅವರ ಫೇಸ್ ಬುಕ್ ಫ್ಯಾನ್ ಪೇಜ್ ಗೆ ಭೇಟಿ ಕೊಡಿ


Click it and Unblock the Notifications











